Monday, January 20, 2025
ಹೆಚ್ಚಿನ ಸುದ್ದಿ

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ 65ನೇ ವರ್ಷದ ಮಹಾಸಭೆ – ಕಹಳೆ ನ್ಯೂಸ್

ವಿಟ್ಲ: ಕೋವಿಡ್ 19 ಹಿನ್ನಲೆಯಲ್ಲಿ ಕೆಲವೊಂದು ಲೋಪಗಳು ಆಗಿದ್ದು, ಸದಸ್ಯರ ಬೇಡಿಕೆಯಂತೆ ಮುಂದಿನ ಬಾರಿಗೆ ಅದನ್ನು ಸರಿಪಡಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೂ ಕಲ್ಲಡ್ಕ ಶಾಖೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಒಪ್ಪಿಗೆ ಬೇಕಾಗಿದ್ದು, ಅದರ ನಿರೀಕ್ಷೆಯಲ್ಲಿದ್ದೇವೆ ಎಂದು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ಅಧ್ಯಕ್ಷ ಎಚ್. ಜಗನ್ನಾಥ ಸಾಲ್ಯಾನ್ ಹೇಳಿದರು. ಅವರು ಬುಧವಾರ ವಿಟ್ಲದ ಬೊಬ್ಬೆಕೇರಿ ಅಕ್ಷಯ ಸಮುದಾಯ ಭವನದಲ್ಲಿ ನಡೆದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ 65 ನೇ ವರ್ಷದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2019-20ನೇ ಸಾಲಿನಲ್ಲಿ ಠೇವಣಾತಿಯಲ್ಲಿ ಶೇ.8.84 ಏರಿಕೆಯಾಗಿದ್ದು, 98.05 ಕೋಟಿ ಠೇವಣಾತಿಯನ್ನು ಹೊಂದಿದೆ. ಸಾರ್ವಜನೋಪಕಾರ ನಿಧಿಯಿಂದ 5.54 ಲಕ್ಷವನ್ನು ಸಾರ್ವಜನಿಕ ಕಾರ್ಯಕ್ಕೆ ಬಳಸಲಿದ್ದು, ಕೋವಿಡ್ 19 ರಿಂದ ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕ ಕಿಟ್ ವಿತರಿಸುವ ನಿಟ್ಟಿನಲ್ಲಿ 50 ಸಾವಿರ ನೀಡಲಾಗಿದೆ. ಮತ್ತು ಗ್ರಾಹಕರ ಅನುಕೂಲಕ್ಕಾಗಿ ನೆಪ್ಟ್, ಆರ್. ಟಿ. ಜಿ. ಎಸ್. ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮುರಳಿ ಶ್ಯಾಮ್ ಕೆ. ಅವರು ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 474.23 ಕೋಟಿ ರೂಪಾಯಿಗಳ ವ್ಯವಹಾರವನ್ನು ನಡೆಸಿ 1.55 ಕೋಟಿ ಲಾಭಗಳಿಸಿದೆ. 6402 ಸದಸ್ಯರಿದ್ದು, 2.29ಕೋಟಿ ಪಾಲು ಬಂಡವಾಳವನ್ನು ಹೊಂದಿದೆ. ಆಡಿಟ್ ವರ್ಗೀಕರಣದಲ್ಲಿ ಕಳೆದ ಕೆಲವು ವರ್ಷಗಳಿಂದ ಸತತವಾಗಿ ಎ ತರಗತಿಯಲ್ಲಿ ಮುನ್ನಡೆಯುತ್ತಿದೆ. ಕರೊನಾ ಸಂಕಷ್ಟದಲ್ಲೂ ಶೇ.89.08 ಸಾಲ ವಸೂಲಾತಿ ಮಾಡಲಾಗಿದೆ ಎಂದು ಮಾತನಾಡಿದರು. ಹಾಗೆಯೇ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ 65 ನೇ ವರ್ಷದ ಮಹಾಸಭೆಯನ್ನು ಹಿರಿಯ ಸದಸ್ಯರಾದ ಈಶ್ವರ ಭಟ್ ಕುಕ್ಕಿಲ ಮತ್ತು ಕೊರಗಪ್ಪ ಗೌಡ ಅವರು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು