Exclusive : ಕರುನಾಡಿನ ಫಯರ್ ಬ್ರಾಂಡ್ ಯೋಗಿಗಳ ಸಮ್ಮಿಲನ.!? ರಾಮರಾಜ್ಯ ನಿರ್ಮಾಣಕ್ಕೆ ಹನುಮ ಸೇನೆ ಸಿದ್ಧ – ಕಹಳೆ ನ್ಯೂಸ್
ದಕ್ಷಿಣ ಕನ್ನಡ / ಉಡುಪಿ : ಎರಡೂ ಜಿಲ್ಲೆಗಳಲ್ಲಿ ಹಿಂದೂತ್ವದ ಫಯರ್ ಬ್ರಾಂಡ್ ಸಂತರು ಎಂದೇ ಪ್ರಸಿದ್ಧ ಪಡೆದ ಶೀರೂರು ಮತ್ತು ವಜ್ರದೇಹಿ ಶ್ರೀಗಳು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ರಾಮರಾಜ್ಯ ನಿರ್ಮಾಣಕ್ಕೆ ಹನುಮನ ಆರಾಧಕ ಸಂಕಲ್ಪ :
ಹೌದು, ಇಬ್ಬರೂ ಮುಖ್ಯಪ್ರಾಣನ ಆರಾಧಕರು, ಕರ್ನಾಟಕದ ಬದಲಾವಣೆಗೆ ಕರ್ನಾಟಕವನ್ನು ರಾಮರಾಜ್ಯವಾಗಿ ನಿರ್ಮಾಣಮಾಡಲು ಈ ಇಬ್ಬರೂ ಸಂತರ ಅವಶ್ಯಕತೆ ಕರ್ನಾಟಕಕ್ಕಿದೆ ಎಂಬುದು ರಾಜ್ಯದ ರಾಜಕೀಯ ವಿಶ್ಲೇಶಕರು ಮಾತುಗಳು.
ಸ್ಫರ್ಧಿಸಿದರೆ ಗೆಲವು ಸಾಧ್ಯವೇ?
ಖಂಡಿತ ಸಾಧ್ಯ, ಉಡುಪಿ ಜಿಲ್ಲೆಯಾದ್ಯಂತ ಜನಾನುರಾಗಿರಾಗಿ, ಜನರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಸರಳ ಸಜ್ಜನಿಕೆಯ ಸಂತ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು. ದೇಶ ವಿದೇಶದಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದು, ಉಡುಪಿಯಲ್ಲಿ ಪ್ರತಿಮನೆಯಿಂದ ಬಿಜೆಪಿ ಕಾಂಗ್ರೆಸ್ ಎನ್ನದೆ ಎಲ್ಲಾ ಮತಗಳು ಶ್ರೀಗಳಿ ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಸೋ ಶೀರೂರು ಸ್ವಾಮೀಜಿಯವರು 100% ಭರ್ಜರಿ ಗೆಲುವು ದಾಖಲಿಸುತ್ತಾರೆ ಎನ್ನುತ್ತವೆ ಸಮೀಕ್ಷೆಗಳು, ಈ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಶ್ರೀಗಳೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಶ್ರೀಗಳು ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ.
ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ :
ಕೇಸರಿಯವರ ಪಾಲಿಗೆ ಮಾಹಾ ಶಕ್ತಿ, ಹಿಂದೂ ವಿರೋಧಿಗಳ ಪಾಲಿಗೆ ಸಿಂಹಸ್ವಪ್ನರಾದ ರಾಜ್ಯದ ಏಕೈಕ ಸಂತ ಎಂಬ ಹೆಗ್ಗಳಿಕೆ ಪಡೆದವರು ಶ್ರೀಗಳು, ತಾವೇ ಹೇಳುವಂತೆ ” ನಾವು ಮಠಕಟ್ಟಿ ಕುರುವ ಸಂತರಲ್ಲ, ಸಮಾಜದ ಶ್ರೇಯಸ್ಸಿಗಾಗಿ ಹಗಲಿರುಳು ಶ್ರಮಿಸುತ್ತೇವೆ, ನಮಗೆ ಹಿಂದುತ್ವವೇ ಜೀವಾಳ ” ಎನ್ನುವ ಮಾಹಾತ್ಯಾಗಿ ಈ ವೈರಾಗಿ. ಹೀಗಾಗಿಯೇ ವಜ್ರದೇಹಿ ಶ್ರೀಗಳೆಂದರೆ ಯುವಕರಿಗೆ ಎಲ್ಲಿಲ್ಲದ ಗೌರವ ಪ್ರೀತಿ ಎಲ್ಲ, ಹೀಗಾಗಿ ಯುವಕರು ಇಂದು ಪ್ರಬಲವಾಗಿ ವಜ್ರದೇಹಿ ಶ್ರೀಗಳು ರಾಜಕೀಯ ಪ್ರವೇಶಿಸಿಬೇಕು ಎಂಬ ಆಗ್ರಹ ಶ್ರೀಗಳ ಮುಂದಿಟ್ಟಗ, ಸಮಾಜದ ನನ್ನ ಅವಶ್ಯಕತೆ ನಿಜವಾಗಿ ಇದೆ ಎಂದಾದರೆ ಸರ್ವಸಂಘ ಪರಿತ್ಯಾಗಿಗಳಿಗೆ ಸಮಾಜದ ಉದ್ದಾರೆಕ್ಕೆ ಯಾವ ಕ್ಷೇತ್ರವಾದರೂ ಸರಿ, ನಾವು ಸಮಾಜದ ಎಳಿಗೆಗ್ಗಾಗಿ ಶ್ರಮಿಸುತ್ತೇವೆ ಎನ್ನುತ್ತಾರೆ ಶ್ರೀಗಳು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲುವು ಖಚಿತ.
ಪ್ರಾಣ ದೇವರ ಪ್ರೇರಣೆ ಪಡೆದ ಸಂತರ ಸಮಾಗಮ :
ಮುಖ್ಯಪ್ರಾಣ ದೇವರ ಪರಮ ಭಕ್ತರಾದ ಇಬ್ಬರು ಸಂತರು ಜೊತೆಯಾಗಿ ಸಮಾಜದ ಜಾಗೃತಿಗಾಗಿ ಶ್ರಮಿಸುವ ಸಂಕಲ್ಪ ಮಾಡಿದ್ದಾರೆ. ಕರ್ನಾಟಕವನ್ನು ರಾಮರಾಜ್ಯ ಮಾಡಬೇಕು ಎಂಬ ಸಂಕಲ್ಪತೊಟ್ಟಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಹದಗೆಟ್ಟರಾಜಕೀಯ ಪರಿಸ್ಥಿತಿ, ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯ, ಗೋವುಗಳ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧವಾಗಿ ಧ್ವನಿ ಅಡಗಿರುವ ಕಾಲಘಟ್ಟದಲ್ಲಿ ರಾಜ್ಯಕ್ಕೆ ಯೋಗಿಗಳ ಅವಶ್ಯಕತೆ ಇದೆ. ಯೋಗಿ ಅದಿತ್ಯನಾಥರ ಮಾದರಿಯಲ್ಲಿ ರಾಜ್ಯದಲ್ಲಿ ಬದಲಾವಣೆಗೆ ಈ ಇಬ್ಬರೂ ಸಂತರು ಅತ್ಯಂತ ಸೂಕ್ತ ಎಂಬುದು ರಾಜಕೀಯ ವಿಶ್ಲೇಷಕರು, ವಿಮರ್ಶಕರ ಮಾತು ಈ ಹಿನ್ನೆಲೆಯಲ್ಲಿ ರಾಜಕೀಯ ಚಾಣಕ್ಯ ಅಮಿತ್ ಶಾ ಈ ಹಿನ್ನಲೆಯಲ್ಲಿ ಚಿಂತನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಬ್ಬರೂ ಸಂತರಿಗೆ ಪ್ರಾಣದೇವರ ಪೂರ್ಣ ಆಶೀರ್ವಾದ ವಿರುವುದು ಶೀರಕ್ಷೆಯಗಲಿದೆ.