Sunday, January 19, 2025
ಕಡಬ

ಶಾಲೆಗೆಂದು ತೆರಳಿದ ಹೈಸ್ಕೂಲ್ ವಿದ್ಯಾರ್ಥಿನಿ ಕಡಬದಲ್ಲಿ ನಾಪತ್ತೆ – ಕಹಳೆ ನ್ಯೂಸ್

ಕಡಬ: ಶಾಲೆಗೆಂದು ತೆರಳಿದ ಹೈಸ್ಕೂಲ್ ವಿಧ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಮರ್ದಾಳದಲ್ಲಿ ನಡೆದಿದೆ. ನಾಪತ್ತೆಯಾಗಿರುವ ಬಾಲಕಿ ಐತ್ತೂರು ಗ್ರಾಮದ ಬೆತ್ತೋಡಿ ಸಿ.ಆರ್.ಸಿ ಕಾಲನಿಯ ನಿವಾಸಿ ಜಗದೀಶ ಎಂಬವರ ಪುತ್ರಿ 16 ವರ್ಷದ ನರ್ಮದಾ ಬಿ.ಜೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಕೆ ಮರ್ದಾಳದ ಹೈಸ್ಕೂಲ್ ವಿಧ್ಯಾರ್ಥಿನಿಯಾಗಿದ್ದು, ಬುಧವಾರ ಶಾಲೆಗೆಂದು ತೆರಳಿದವಳು, ಮನೆಗೆ ಬಾರದ ಕಾರಣ ಅಧ್ಯಾಪಕರಲ್ಲಿ ವಿಚಾರಿಸಿದಾಗ ಶಾಲೆಗೆ ರಜೆ ಇರುವುದಾಗಿ ತಿಳಿಸಿದ್ದಾರೆ. ನಾಪತ್ತೆಯಾಗಿರುವ ಮಗಳನ್ನು ಹುಡುಕಿಕೊಡುವಂತೆ ಬಾಲಕಿಯ ತಂದೆ ಜಗದೀಶ್ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಿಳಿ ಬಣ್ಣದ ಚೂಡಿದಾರ ಧರಿಸಿರುವ ಈಕೆ ಕನ್ನಡ, ತುಳು, ತಮಿಳು ಭಾಷೆ ಮಾತನಾಡುತ್ತಾಳೆ. ಈಕೆಯ ಬಗ್ಗೆ ಸುಳಿವು ಸಿಕ್ಕರೆ ಕಡಬ ಪೊಲೀಸ್ ಠಾಣೆ 08251- 260044 ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು