Sunday, January 19, 2025
ಪುತ್ತೂರು

ಕೋಡಿಂಬಾಡಿಯ ಅಶ್ವತ್ಥಕಟ್ಟೆ ಧರ್ಮ ಶ್ರೀ ಕಲಾವೃಂದದ ವತಿಯಿಂದ 10 ನೇ ವರ್ಷದ ರಕ್ತದಾನ ಶಿಬಿರ – ಕಹಳೆ ನ್ಯೂಸ್

ಪುತ್ತೂರು: ಕೋಡಿಂಬಾಡಿಯ ಅಶ್ವತಕಟ್ಟೆ ಧರ್ಮ ಶ್ರೀ ಕಲಾವೃಂದದ ವತಿಯಿಂದ ಹತ್ತನೇ ವರ್ಷದ ರಕ್ತದಾನ ಶಿಬಿರ ಚತುರ್ಥಿ ರಂಗಮಂದಿರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಬಾಲಕೃಷ್ಣ ಬೋರ್ಕರ್ ಭಾರತ ಮಾತೆಯ ಭಾವಚಿತ್ರದ ಎದುರು ದೀಪ ಬೆಳಗಿಸುವ ಮೂಲಕ , ಚಾಲನೆ ನೀಡಿದರು. ಹಾಗೂ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಗೆ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ| ರಾಮಚಂದ್ರ ಭಟ್ ಮಾಹಿತಿ ನೀಡಿದ್ದು, ಕಾರ್ಯಕ್ರಮದಲ್ಲಿ ರಂಗ ಕಲಾವಿದ ರಾಜೇಶ್ ಶಾಂತಿನಗರ ಅವರನ್ನು ಸನ್ಮಾನಿಸಲಾಯಿತು. ಮತ್ತು ಕೋಡಿಂಬಾಡಿ ಗ್ರಾಮದ ಕೊರೋನಾ ವಾರಿಯರ್ಸ್‌ ಗೆ ಅಭಿನಂದನೆ ಸಲ್ಲಿಸಲಾಯಿತು. ಹಾಗೆಯೇ ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಸೀತಾರಾಮ್ ಶೆಟ್ಟಿ ಹೆಗ್ಢೆಹಿತ್ತಿಲು, ವಾರಿಸೇನ ಜೈನ್ , ರಾಜೇಶ್ ಶೆಟ್ಟಿ ಪಾದೆ ಉಪಸ್ಥಿತರಿದ್ದರು.ಮತ್ತು ಕಲಾವೃಂದದ ಅಧ್ಯಕ್ಷ ರಾಜೇಶ್ ಪಾದೆ, ಕಾರ್ಯದರ್ಶಿ ದಯಾನಂದ ಬೋಳಾಜೆ, ಗೌರವಾಧ್ಯಕ್ಷ ಶೇಖರ ಪೂಜಾರಿ ನಿಡ್ಯ, ನ್ಯಾಯವಾದಿ ಕುಮಾರನಾಥ್ ಅವರುಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು