Sunday, January 19, 2025
ಪುತ್ತೂರು

ಚಿನ್ನದ ಸರವನ್ನು ಅದರ ವಾರೀಸುದಾರರಿಗೆ ಹಿಂತಿರುಗಿಸಿ, ಪ್ರಾಮಾಣಿಕತೆ ಮೆರೆದ ಪಾಣಾಜೆ ‌ಆರೋಗ್ಯ ಕೇಂದ್ರದ ಚಾಲಕ ಸತೀಶ್ ಕುಮಾರ್ – ಕಹಳೆ ನ್ಯೂಸ್

ಪುತ್ತೂರು: ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚಾಲಕ ಸತೀಶ್ ಕುಮಾರ್ ಅವರು ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಅದರ ವಾರೀಸುದಾರರಿಗೆ ಹಿಂತಿರುಗಿಸುವ ಮೂಲಕ ಪ್ರಮಾಣಿಕತೆ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಸೆಂಬರ್ 20 ರಂದು ಸುಳ್ಯ ತಾಲೂಕಿನ ಸಂಪಾಜೆ ಗೂನಡ್ಕದ ದೀಕ್ಷಿತ್ ರವರು ಈಶ್ವರಮಂಗಲದ ಹನುಮಗಿರಿ ದೇವಸ್ಥಾನಕ್ಕೆ ಬಂದಿದ್ದ ವೇಳೆ ಸುಮಾರು 9 ಗ್ರಾಂ ತೂಕದ ಚಿನ್ನದ ಸರ ಕಳೆದುಹೋಗಿತ್ತು. ಈ ಸರವು ಮುಖ್ಯ ರಸ್ತೆಯ ದ್ವಾರದ ಬಳಿಯಲ್ಲಿ ಬಿದ್ದಿದ್ದು, ಆರೋಗ್ಯ ಕೇಂದ್ರದ ಚಾಲಕ ಸತೀಶ್ ಕುಮಾರ್ ಅವರಿಗೆ ಸಿಕ್ಕಿತ್ತು. ಹಾಗಾಗಿ ಸತೀಶ್ ಕುಮಾರ್ ಅವರು ಸರ ಬಿದ್ದು ಸಿಕ್ಕಿರುವ ಕುರಿತು ಹನುಮಗಿರಿಯ ವಿಚಾರಣಾ ಕೌಂಟರ್ ಗೆ ಮಾಹಿತಿ ನೀಡಿದ್ದು, ತಮ್ಮ ದೂರವಾಣಿ ಸಂಖ್ಯೆಗೆ ಸಂರ್ಪಕಿಸುವಂತೆ ತಿಳಿಸಿದ್ದರು. ಬಳಕ ಅವರನ್ನು ಸಂಪ್ಯ ಠಾಣೆಗೆ ಕರೆಯಿಸಿ ಚಿನ್ನದ ಸರವನ್ನು ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಅವರು ಪ್ರಮಾಣಿಕತೆ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು