ಪುತ್ತೂರು: ಅಲ್ಯೂಮಿನಿಯಮ್ ಕೊಕ್ಕೆಯ ಸಹಾಯದಿಂದ, ಮರದಿಂದ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿ, ವಿದ್ಯುತ್ ಸ್ಪರ್ಷದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿ ನಡೆದಿದೆ.
ಬಾಬು ಪೂಜಾರಿ ಎಂಬುವರ ಪುತ್ರ ರವೀಂದ್ರ ಪೂಜಾರಿ (36) ಮೃತಪಟ್ಟ ದುರ್ದೈವಿ. ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಇವರು, ಕ್ರಿಸ್ಮಸ್ ರಜೆಯ ನಿಮಿತ್ತ ಮನೆಗೆ ಬಂದಿದ್ದರು. ಈ ವೇಳೆ ತಮ್ಮ ಮನೆ ಸುತ್ತ ಅಡಿಕೆ ಕೊಯ್ಲು ಮಾಡುವ ಉದ್ದೇಶದಿಂದ ಅಲ್ಯೂಮಿನಿಯಮ್ ಕೊಕ್ಕೆಯ ಮೂಲಕ ಅಡಿಕೆ ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ಕೊಕ್ಕೆಯೂ ಮೇಲೆ ಹಾದು ಹೋಗಿದ್ದ ಹೆಚ್ಟಿ ವಿದ್ಯುತ್ ತಂತಿಗೆ ಕೊಕ್ಕೆಯು ತಗುಲಿ ವಿದ್ಯುತ್ ಸ್ಪರ್ಶಿಸಿ ಈ ಅವಘಡ ಸಂಭವಿಸಿದೆ. ಪುತ್ತೂರು ಗ್ರಾಮಾಂತರ ಪೆÇಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.