Thursday, January 23, 2025
ಹೆಚ್ಚಿನ ಸುದ್ದಿ

ನಾಳೆ ಭಾರತದ ಮೊದಲ ʼಚಾಲಕ ರಹಿತʼ ರೈಲು ಸೇವೆಗೆ ಪ್ರಧಾನಿ ಮೋದಿ ಚಾಲನೆ – ಕಹಳೆ ನ್ಯೂಸ್

ನವದೆಹಲಿ: ಭಾರತದ ಮೊದಲ ಚಾಲಕ ರಹಿತ ರೈಲು ಸೇವೆಯನ್ನ ಡಿಸೆಂಬರ್ 28ರಂದು (ನಾಳೆ) ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ದೆಹಲಿ ಮೆಟ್ರೋದ 37 ಕಿ.ಮೀ ಉದ್ದದ ಮೆಜೆಂಟಾ ಲೈನ್ (ಜನಕಪುರಿ ವೆಸ್ಟ್ ನಿಂದ ಬೊಟಾನಿಕಲ್ ಗಾರ್ಡನ್) ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಚಾಲಕ ರಹಿತ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದರ ಜೊತೆಗೆ, ಪಿಎಂ ಮೋದಿ ಅವರು ಏರ್ ಪೋರ್ಟ್ ಎಕ್ಸ್ ಪ್ರೆಸ್ ಲೈನ್ ನಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ʼನ್ನ ಕೂಡ ಅದೇ ದಿನ ಪ್ರಾರಂಭಿಸಲಿದ್ದಾರೆ ಎಂದು ನಿಗಮ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಷ್ಟೇ ಅಲ್ಲ, ಮೆಟ್ರೋ ನಿಲ್ದಾಣಗಳಲ್ಲಿ ಕೊರೊನಾ ವೈರಸ್ ಹಾವಳಿ ಮತ್ತು ಕಾಂಟ್ಯಾಕ್ಟ್ ಲೆಸ್ ಸೇವೆಗಳನ್ನ ಈ ವೈರಸ್ ಹರಡುವಿಕೆಯನ್ನ ನಿಯಂತ್ರಿಸಲು ಜಾರಿಗೆ ತಂದಿರುವ ಕಾಂಟ್ಯಾಕ್ಟ್ ಲೆಸ್ ಸೇವೆಗಳ ನಡುವೆ, ಮೆಟ್ರೋ ನಿಲ್ದಾಣಗಳಲ್ಲಿ ನಗದು ವ್ಯವಹಾರವನ್ನ ಸೀಮಿತ ರೀತಿಯಲ್ಲಿ ಅನುಮತಿಸುತ್ತಿದ್ದೇವೆ ಎಂದು ಡಿಎಂಆರ್ ಸಿ ತಿಳಿಸಿದೆ. ಆದರೆ, ಟೋಕನ್ ಮಾರಾಟಕ್ಕೆ ಇನ್ನೂ ಅನುಮತಿ ಇಲ್ಲ. ಅಲ್ಲದೆ, ಸಾರ್ವಜನಿಕರು ಕ್ಯಾಶ್ ಲೆಸ್ ವಿಧಾನ ಬಳಸಿ ಕೋವಿಡ್-19ರ ವಿರುದ್ಧ ರಕ್ಷಣೆ ಪಡೆಯಲು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿ ಮೆಟ್ರೋ ಭಾರತದ ಅತಿ ದೊಡ್ಡ ಮೆಟ್ರೋ ಆಗಿದ್ದು, ಕೊಲ್ಕತ್ತಾ ಮೆಟ್ರೋ ನಂತರ ದೇಶದ ಎರಡನೇ ಅತಿ ಹಳೆಯ ಮೆಟ್ರೋ ಆಗಿದೆ. ದೆಹಲಿ ಮೆಟ್ರೋ ಚಾಲಕರಹಿತ ರೈಲುಗಳು ಡಿಎಂಆರ್ ಸಿಯ ಮೂರನೇ ಹಂತದ ಭಾಗವಾಗಿ ತಯಾರಿಸಲಾದ ಮೆಜೆಂಟಾ ಲೈನ್ ಮತ್ತು ಪಿಂಕ್ ಲೈನ್ ನಲ್ಲಿ ಕಾರ್ಯನಿರ್ವಹಿಸಲಿವೆ. 2017ರ ಸೆಪ್ಟೆಂಬರ್ ನಲ್ಲಿ ದೆಹಲಿ ಮೆಟ್ರೋ ಪಿಂಕ್ ಲೈನ್ ನಲ್ಲಿ 20 ಕಿ.ಮೀ ಉದ್ದದ ಹೊಸ ‘ಚಾಲಕರಹಿತ ರೈಲು’ಗಳ ಪೂರ್ಣ ಸಿಗ್ನಲ್ ಪ್ರಯೋಗಗಳನ್ನು ಆರಂಭಿಸಿತ್ತು.