Thursday, January 23, 2025
ಹೆಚ್ಚಿನ ಸುದ್ದಿ

2010ರಲ್ಲಿ 1 ಯುಎಸ್ ಡಿ ಇದ್ದ ಬಿಟ್ ಕಾಯಿನ್ ಇಂದು 26,900 ಯುಎಸ್ ಡಿ – ಕಹಳೆ ನ್ಯೂಸ್

ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಶನಿವಾರದಂದು ಸಾರ್ವಕಾಲಿಕ ದಾಖಲೆಯಾದ $ 26,000 (ಭಾರತದ ರುಪಾಯಿ ಮೌಲ್ಯ 19,14,276) ಮುಟ್ಟಿತು. ಈಗ ಕ್ರಿಪ್ಟೋಕರೆನ್ಸಿ $ 27,000 ಸಮೀಪ ಇದೆ. ಭಾನುವಾರ ಬೆಳಗ್ಗೆ 7.13ರ ವೇಳೆಗೆ ಬಿಟ್ ಕಾಯಿನ್ 26,900 ಯುಎಸ್ ಡಿ ಸಮೀಪ ವಹಿವಾಟು ನಡೆಸಿತು.

ಕಾಯಿನ್ ಮಾರ್ಕೆಟ್ ಕ್ಯಾಪ್ ಪ್ರಕಾರ, ಇಪ್ಪತ್ತಕ್ಕೂ ಹೆಚ್ಚು ದಲ್ಲಾಳಿಗಳಿಂದ ದತ್ತಾಂಶ ಒಟ್ಟು ಮಾಡಿದಂತೆ, ಕಳೆದ 24 ಗಂಟೆಯಲ್ಲಿ ಬಿಟ್ ಕಾಯಿನ್ 8%ಗೂ ಹೆಚ್ಚಾಗಿದೆ. ಈ ಏರಿಕೆಯೊಂದಿಗೆ ವಿಶ್ವದ ಅತಿ ದೊಡ್ಡ ಕ್ರಿಪ್ಟೋ ಕರೆನ್ಸಿ ಈ ವರ್ಷದಲ್ಲಿ ಇಲ್ಲಿತ ತನಕ 271% ಹೆಚ್ಚಳ ಆಗಲಿದೆ.
ಡಿಸೆಂಬರ್ 16, 2020ರಂದು ಬಿಟ್ ಕಾಯಿನ್ ಮೊದಲ ಬಾರಿಗೆ ಗರಿಷ್ಠ ಮಟ್ಟವಾದ 20,000 ಯುಎಸ್ ಡಿ ತಲುಪಿತು. 2010ನೇ ಇಸವಿಯಲ್ಲಿ ಬಿಟ್ ಕಾಯಿನ್ ಖರೀದಿಗೆ ಲಭ್ಯವಾಗುತ್ತಿದ್ದುದು 1 ಯುಎಸ್ ಡಿಗೆ. ಇನ್ನು ಈ ವರ್ಷದ ಏರಿಕೆ ತಾತ್ಕಾಲಿಕ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.ಭಾರತದಲ್ಲಿ ಮುಂದಿನ ಅಲ್ಪಾವಧಿಯಲ್ಲಿ 1 ಕೋಟಿ ಅವಧಿ ತಲುಪಬಹುದು. “ಜಾಗತಿಕ ಮಾರುಕಟ್ಟೆಯಲ್ಲಿ 2021ರಲ್ಲಿ ಬಿಟ್ ಕಾಯಿನ್ ಬೇಡಿಕೆ ಇರುವ ಹಿನ್ನೆಲೆಯಲ್ಲಿ 50 ಲಕ್ಷದಿಂದ 1 ಕೋಟಿ ರುಪಾಯಿ ಆಗಬಹುದು,” ಕಾಯಿನ್ ಡಿಸಿಎಕ್ಸ್ ಸಹ ಸಂಸ್ಥಾಪಕ ಹಾಗೂ ಸಿಇಒ ಸುಮಿತ್ ಗುಪ್ತಾ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು