Thursday, January 23, 2025
ಸುದ್ದಿ

ವಿಷ್ಣು ಪ್ರತಿಮೆ ಧ್ವಂಸ ಮಾಡಿದವರು ಯಾರು ಅಂತಾ ಗೊತ್ತಾದ್ರೆ ಮುಂದಾಗೋದನ್ನು ಯಾರು ತಡೆಯೋಕಾಗಲ್ಲ : ನಟ ಕಿಚ್ಚ ಸುದೀಪ್ – ಕಹಳೆ ನ್ಯೂಸ್

ಬೆಂಗಳೂರು : ಸಾಹಸ ಸಿಂಹ ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಮಾಡಿದ ಕಿಡಿಗೇಡಿಗಳ ವಿರುದ್ಧ ನಟ ಕಿಚ್ಚ ಸುದೀಪ್ ಸಿಡಿದೆದ್ದಿದ್ದು, ಪ್ರತಿಮೆ ಧ್ವಂಸ ಮಾಡಿದವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಟ್ವೀಟರ್ ನಲ್ಲಿ ಮಾತನಾಡಿರುವ ಕಿಚ್ಚ ಸುದೀಪ್,ಪುತ್ಥಳಿ ಹೊಡೆದು ಹಾಕಿರುವ ಮಹಾನುಭಾವರಿಗೆ ಒಂದಿಷ್ಟು ವಿಷಯ ಹೇಳೋಕೆ ಇಷ್ಟ ಪಡುತ್ತೇನೆ. ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ. ಏಕೆಂದರೆ ಪ್ರತಿಮೆ ಯಾರು ಹೊಡೆದು ಹಾಕಿದ್ದಾರೋ ಅವರು ಸಿಕ್ಕಿಹಾಕಿಕೊಂಡರೆ ವಿಷ್ಣು ಅಭಿಮಾನಿಗಳು ಹೀನಾಯವಾಗಿ ಹೊಡೆದು ಹಾಕುತ್ತಾರೆ. ನಿಮ್ಮ ಉದ್ದೇಶ ಅರ್ಥ ಆಗಲು ಸಾಧ್ಯವಿಲ್ಲ.ಮನುಷ್ಯರಾದವರಿಗೆ ಅದು ಅರ್ಥವೂ ಆಗಲ್ಲ. ಆದರೆ ದಯವಿಟ್ಟು ಸಿಕ್ಕಿ ಹಾಕಿಕೊಳ್ಳದ ಹಾಗೆ ನೋಡಿಕೊಳ್ಳಿ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿಮ್ಮ ಹೆಸರು ಹೊರಗೆ ಬಂದರೆ ಮುಂದೆ ನಡೆಯುವುದನ್ನು ಖಂಡಿತವಾಗಿ ಯಾರು ತಡೆಯಲು ಸಾಧ್ಯವಿಲ್ಲ. ಆ ಮೂರ್ತಿ ಬಿಡಿ, ಅದರ ಅಪ್ಪನ ಹಾಗಿದ್ದು ಮೂರ್ತಿ ಕಟ್ಟುತ್ತೇವೆ ಅದು ಬೇರೆ ವಿಷಯ. ದಯವಿಟ್ಟು ಯಾರು ಸಿಕ್ಕಿಹಾಕಿಕೊಳ್ಳಬೇಡಿ ಎಂದು ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು