ಪುತ್ತೂರಿನ ಹಂಟ್ಯಾರು ಮತಗಟ್ಟೆ ಆವರಣದಲ್ಲಿ ಪತ್ತೆಯಾದ ಚುನಾವಣಾ ಅಭ್ಯರ್ಥಿಯ ಚಿಹ್ನೆಯ ಚೀಟಿ : ಪ್ರಕರಣವನ್ನ ಪತ್ತೆ ಹಚ್ಚಿದ ಚುನಾವಣಾಧಿಕಾರಿ ಡಾ. ಯತೀಶ್ ಉಳ್ಳಾಲ್ – ಕಹಳೆ ನ್ಯೂಸ್
ಹಂಟ್ಯಾರು : ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ, ಕೆಲವು ಕಡೆ ಶಾಂತಿಯುತವಾಗಿ ಚುನಾವಣೆ ನಡಿತಾ ಇದೆ. ಆದರೆ ಪುತ್ತೂರಿನ ಹಂಟ್ಯಾರು ಶಾಲಾ ಮತಗಟ್ಟೆಯಲ್ಲಿ ಮತದಾನದ ಚೀಟಿ ನೀಡುತ್ತಿರುವಪ್ರಕರಣ ಬೆಳಕಿಗೆ ಬಂದಿದೆ.ಚುನಾವಣೆಗೆ ಸಂಬಂಧ ಪಟ್ಟಂತೆ ಮತಗಟ್ಟೆಗಳನ್ನು ಪರಿಶೀಲನೆ ಮಾಡಲೆಂದು ಚುನಾವಣಾಧಿಕಾರಿ ಡಾ. ಯತೀಶ್ ಉಳ್ಳಾಲ್ ಅವರು, ಪುತ್ತೂರು ತಾಲೂಕಿನ ಹಂಟ್ಯಾರು ಶಾಲಾ ಮತಗಟ್ಟೆಗೆ ಬೇಟಿ ನೀಡಿದರು, ಈ ವೇಳೆ ಮತಗಟ್ಟೆಯ ಹೊರಗೆ, ಮತದಾನ ಮಾಡಲೆಂದು ನಿಂತಿದ್ದ ವ್ಯಕ್ತಿಯೋರ್ವನ ಕೈಯಲ್ಲಿರುವ ಚೀಟಿಯನ್ನು ನೋಡಿ, ಆತನಲ್ಲಿ ಚೀಟಿಯ ವಿಚಾರವಾಗಿ ಕೇಳಿದಾಗ, ಆತ ಚೀಟಿ ಕೊಟ್ಟಸ್ಥಳವನ್ನು ತೋರಿಸಿದ್ದಾನೆ. ತಕ್ಷಣ ಅಲ್ಲಿಗೆ ಧಾವಿಸಿದ ಡಾ. ಯತೀಶ್ ಉಳ್ಳಾಲ್ ಅವರು ಬೂತ್‍ನಲ್ಲಿ ಟೇಬಲ್ ಹಾಕಿ ಕೂತಿದ್ದವರನ್ನು ವಿಚಾರಿಸಿದ್ದಾರೆ. ಬಳಿಕ ಟೇಬಲ್ ಕೆಳಗೆ ಇದ್ದ ಅಭ್ಯರ್ಥಿಗಳ ಚಿಹ್ನೆ ಇದ್ದ ಚೀಟಿನ ಒಂದು ಕಟ್ಟನ್ನು ಪತ್ತೆ ಮಾಡಿದ್ದಾರೆ. ಇದೆ ವೇಳೆ ಅಭ್ಯರ್ಥಿಯೋರ್ವ ಮತದಾರರಿಗೆ ಚೀಟಿ ಕೊಡುತ್ತಿರುವುದನ್ನು ಸಹಾಯಕ ಕಮೀಷನರ್ ಪತ್ತೆ ಮಾಡಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಜರಗಿಸುವಂತೆ ಮತಗಟ್ಟೆಯ ಪರೀಶಿಲನಾಧಿಕಾರಿಗೆ ಸೂಚನೆ ನೀಡಿದ್ದಾರೆ.