Saturday, November 23, 2024
ಪುತ್ತೂರು

ಮುಂಜಾನೆಯಿಂದ ಬಿರುಸಿನ ಗ್ರಾಮ ಪಂಚಾಯತ್ ಮತದಾನ; ಪುತ್ತೂರಿನಲ್ಲಿ ಬೂತ್ ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ- ಕಹಳೆ ನ್ಯೂಸ್

ಪುತ್ತೂರು: ಗ್ರಾಮ ಪಂಚಾಯತ್ ಚುನಾವಣೆಯ 2ನೇ ಹಂತದ ಮತದಾನ ಇಂದೂ ಮುಂಜಾನೆಯಿಂದ ಬಿರುಸಿನಿಂದ ಸಾಗಿದ್ದು ಪುತ್ತೂರು ತಾಲೂಕಿನಲ್ಲಿಯೂ ಇಂದು ಮುಂಜಾನೆಯಿಂದ ಮತದಾನ ಪ್ರಾರಂಭಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಇವರು ಪುತ್ತೂರಿನ ಹಲವು ಮತದಾನ ಬೂತ್ ಗಳಿಗೆ ಇಂದು ಭೇಟಿ ನೀಡಿದರು. ಬೂತ್ ಗಳಲ್ಲಿ ನಡೆಯುತ್ತಿರುವ ಮತದಾನದ ಕುರಿತು ವ್ಯವಸ್ಥೆಯ ಕುರಿತು ಪರಿಶೀಲಿಸಿದರು.

ಇದಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾರ್ಥಮಿಕ ಶಾಲೆ ಕುರಿಯ ಇಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಇವರು ಮುಂದೆ ಸುಳ್ಯ, ಬೆಳ್ತಂಗಡಿ ತಾಲೂಕುಗಳಿಗೂ ಭೇಟಿ ನೀಡಲಿದ್ದು, ಪುತ್ತೂರಿನಲ್ಲಿ ಉತ್ತಮ ರೀತಿಯಲ್ಲಿ ಮತದಾನ ಈ ವರೆಗೆ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

ಇದಲ್ಲದೆ ಕೋವಿಡ್ ರೋಗಿಗಳಿಗೂ ಮತದಾನ ಮಾಡಲು ಜಿಲ್ಲಾಡಳಿತ ಕಿಟ್ ವಿತರಿಸಿ ಮತದಾನಕ್ಕೆ ಅವಕಾಶ ನೀಡುವುದಾಗಿ ತಿಳಿಸಿದರು.