ಸುಬ್ರಹ್ಮಣ್ಯ ಕುಲ್ಕುಂದ ಕುಮಾರಧಾರ ನದಿಯ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಗಂಡಸಿನ ಮೃತ ದೇಹ ಪತ್ತೆ-ಕಹಳೆ ನ್ಯೂಸ್
ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಗಂಡಸಿನ ಮೃತ ದೇಹ ಪತ್ತೆಯಾದ ಘಟನೆ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕುಮಾರಧಾರ ನದಿಯ ಬಳಿ ನಡೆದಿದೆ.
ಸುಳ್ಯ ತಾಲೂಕು ಗುತ್ತಿಗಾರು ಗ್ರಾಮ ಬಳ್ಳಕ ಪಿಂಡಿಬನ ನಿವಾಸಿ ಆನಂದ ನಾಯ್ಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ಆನಂದ ನಾಯ್ಕ ಎಂಬಾತನು ಮಾನಸಿಕ ಅಸ್ವಸ್ಥ ಹಾಗೂ ಅಮಲು ಪದಾರ್ಥ ಸೇವಿಸುವವನಾಗಿದ್ದು ಸುಮಾರು ಒಂದು ತಿಂಗಳಿಂದ ಮನೆ ಬಿಟ್ಟು ಹೋಗಿದ್ದು, ಇನ್ನು ಮನೆಗೆ ಮರಳಿ ಬಾರದ ಕಾರಣ ಹುಡುಕಾಟ ನಡೆಸಿದ್ದಾರೆ. ಬಳಿಕ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕುಮಾರಧಾರ ನದಿ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸುಬ್ರಹ್ಮಣ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.