Saturday, November 23, 2024
ಹೆಚ್ಚಿನ ಸುದ್ದಿ

ಮಾರ್ಚ್ 31ರವರೆಗೆ ಪರವನಾಗಿ ಸೇರಿದಂತೆ ವಾಹನ ನೊಂದಣಿ ಪ್ರಕ್ರಿಯೆ ವಿಸ್ತರಣೆ-ಕಹಳೆ ನ್ಯೂಸ್

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಮೋಟಾರು ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕಿಂತ ಮೊದಲು ಎಲ್ಲಾ ದಾಖಲೆಗಳನ್ನು ಡಿಸೆಂಬರ್ 31ರೊಳಗೆ ನೀಡಲು ತಿಳಿಸಲಾಗಿತ್ತು. ಹಾಗೆಯೇ ವಾಹನ ನೋಂದಣಿ ನೀತಿ ಸುಧಾರಣೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಇನ್ನು ವಿಶೇಷ ಚೇತನರಿಗೆ ವಾಹನ ಮಾಲಿಕತ್ವ ಸಮಸ್ಯೆಗೆ ಪರಿಹಾರ ನೀಡಲು ಈ ಹಿಂದೆ ಇದ್ದ ಕಾಯ್ದೆಯಲ್ಲಿ ವಾಹನ ಮಾಲಿಕತ್ವ ಕುರಿತಂತೆ ಸ್ಪಷ್ಟವಾಗಿ ನಮೂದಿಸಲು ಅವಕಾಶ ಇರಲಿಲ್ಲ. ಇದರಿಂದಾಗಿ ವಿಶೇಷ ಹಣಕಾಸು ನೆರವು, ಯೋಜನೆಗಳ ಸೌಲಭ್ಯ ಪಡೆಯುವುದು ಕಷ್ಟವಾಗಿತ್ತು. ಈಗ ಮೋಟಾರು ವಾಹನಗಳ ದಾಖಲಾತಿಗಳಲ್ಲಿ ಮಾಲಿಕತ್ವದ ವಿವರಗಳಿಗೆ ಸಂಬಂಧಿಸಿದಂತೆ ವಾಹನ ನೋಂದಣಿ ನೀತಿ ಸುಧಾರಣೆಗೆ ಸಾರಿಗೆ ಸಚಿವಾಲಯ ಅಧಿಸೂಚನೆಯನ್ನು ಕೂಡ ಈಗಾಗಲೇ ಪ್ರಕಟಿಸಿದ್ದು, ಮೋಟಾರು ವಾಹನ ನಿಯಮಾವಳಿಗಳಿಗೆ ತಿದ್ದುಪಡಿ ಹೊರಡಿಸಲಾಗಿದ್ದು, ಇದರಿಂದ ಮುಖ್ಯವಾಗಿ ವಿಶೇಷ ಚೇತನರಿಗೆ ಉಪಯೋಗವಾಗಲಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು