ಕೊರೊನಾ ಪ್ರಕರಣಗಳ ಬಗ್ಗೆ ವುಹಾನ್ ನಗರದಲ್ಲಿ ಲೈವ್ ವರದಿ ಮಾಡಿದ್ದ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ-ಕಹಳೆ ನ್ಯೂಸ್
ಶಾಂಘೈ: ಕೊರೊನಾ ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ವುಹಾನ್ ನಗರದಲ್ಲಿ ಲೈವ್ ವರದಿ ಮಾಡಿದ್ದ ನಾಗರಿಕ ಪತ್ರಕರ್ತೆಯೊಬ್ಬರಿಗೆ ಶಾಂಘೈ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದು ತಿಳಿದು ಬಂದಿದೆ.
ಅಲ್ಲದೆ ವುಹಾನ್ ನಗರದಲ್ಲಿ ಕೊರೊನಾ ಹರಡುವ ಬಗ್ಗೆ ಝಾಂಗ್ ಮಾಡುತ್ತಿದ್ದ ಲೈವ್ ವರದಿಗಳು, ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹಂಚಿಕೆಯಾಗುತ್ತಿದ್ದವು. ಸಂಘರ್ಷವನ್ನು ಪ್ರೋತ್ಸಾಹಿಸಿ ಹಾಗೂ ತೊಂದರೆ ಉಂಟುಮಾಡಿದ ಆರೋಪದಲ್ಲಿ ಶಾಂಘೈ ನ್ಯಾಯಾಲಯವು ಝಾಂಗ್‍ಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಈವರೆಗೆ ಸರ್ಕಾರ, ಎಂಟು ಮಂದಿಗೆ ಶಿಕ್ಷೆ ವಿಧಿಸಿದೆ.