ಕೊಡಗು: ಕೌಟುಂಬಿಕ ಕಲಹದಿಂದಾಗಿ ಮೂವರಿಗೆ ಚಾಕುವಿನಿಂದ ಚುಚ್ಚಿ ಆರೋಪಿ ಪರಾರಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.
ಚಾಕು ಇರಿತಕ್ಕೆ ಒಳಗಾದವರು ವಿಲ್ಸನ್(45), ಸ್ಟೀವನ್(28) ಮತ್ತು 17 ವರ್ಷದ ಯುವತಿ ಎಂದು ತಿಳಿದು ಬಂದಿದೆ. ಕುಟುಂಬದ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೆ ಏರಿದ ಬಳಿಕ, ರೊಚ್ಚಿಗೆದ್ದ ರಾಮ್ದಾಸ್ ಎಂಬಾತ ಮೂವರಿಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ.
ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಮೊದಲು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಮಡಿಕೇರಿ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶೇಷ ಪೊಲೀಸ್ ತಂಡ ರಚನೆಯಾಗಿದ್ದು, ಪರಾರಿಯಾಗಿರುವ ರಾಮ್ದಾಸ್ನನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.