ಕೊರೊನಾ ಲಸಿಕೆಯಲ್ಲಿ ಹಂದಿ ಅಂಶ; ಮುಸ್ಲಿಂರು ಲಸಿಕೆ ಹಾಕಿಸಿಕೊಳ್ಳಬಹುದೆಂದು ಫತ್ವಾ ಹೊರಡಿಸಿದ ಯುಎಇ-ಕಹಳೆ ನ್ಯೂಸ್
ಮೆಲ್ಬೋರ್ನ್: ಕೊರೊನಾ ಲಸಿಕೆಯನ್ನಯ ಹಂದಿಯ ಗೆಲಾಟಿನ್ ಅನ್ನು ಬಳಸಿ, ತಯಾರಿಸಿ ಮಾಡಲಾಗುತ್ತದೆ ಎನ್ನುವ ವಿಚಾರಕ್ಕೆ ಸಂಬಧಿಸಿದಂತೆ ಆಲ್ ಇಂಡಿಯಾ ಸುನ್ನಿ ಝಮಾತುಲ್ ಉಲೆಮಾ ಕೌನ್ಸಿಲ್ ಲಸಿಕೆಯನ್ನು ಹರಾಮ್ ಎಂದು ಘೋಷಣೆ ಮಾಡಿದೆ.
ಮುಸ್ಲಿಂರಲ್ಲಿ ಹಂದಿಮಾಂಸ ಸೇವನೆ ನಿಷಿದ್ಧ. ಇದು ಹರಾಮ್ ಆಗುತ್ತದೆ. ಹಾಗಾಗಿ ಹಂದಿಯ ಗೆಲಾಟಿನ್ ಅನ್ನು ಬಳಸಿ ಕೊರೊನಾ ಲಸಿಕೆ ತಯಾರಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಸುನ್ನಿ ಝಮಾತುಲ್ ಉಲೆಮಾ ಕೌನ್ಸಿಲ್ ಚೀನಾ ಮೂಲದ ಕೆಲವೊಂದು ಲಸಿಕೆಗಳನ್ನು ಹರಾಮ್ ಎಂದು ಘೋಷಿಸಿತ್ತು. ಈ ಹಿನ್ನೆಲೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ಮುಸ್ಲಿಂರಲ್ಲಿ ಗೊಂದಲವುಂಟಾಗಿದೆ. ಹಾಗಾಗಿ ಈ ಕುರಿತು ಸ್ಪಷ್ಟನೆ ನೀಡಿ ಫತ್ವಾ ಹೊರಡಿಸಿದ ಯುಎಇ ಅತ್ಯುನ್ನತ ಇಸ್ಲಾಂಮಿಕ್ ಕೌನ್ಸಿಲ್, ಹಂದಿಯ ಗೆಲಾಟಿನ್ ಹೊಂದಿರುವ ಕೊರೊನಾ ಲಸಿಕೆಯನ್ನು ಮುಸ್ಲಿಂರು ಹಾಕಿಸಿಕೊಳ್ಳಬಹುದು. ಲಸಿಕೆ ಆಹಾರ ಅಲ್ಲ. ಅದೊಂದು ಔಷಧಿ. ಹಾಗಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬಹುದು ಎಂದು ತಿಳಿಸಿದೆ. ಈ ಬಗ್ಗೆ ಫತ್ವಾ ಹೊರಡಿಸಿರುವ ಯುಎಇ ಅತ್ಯುನ್ನತ ಇಸ್ಲಾಂಮಿಕ್ ಕೌನ್ಸಿಲ್‍ನ ಘೋಷಣೆಯನ್ನು ಭಾರತೀಯ ಮುಸ್ಲಿಂರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಾಗಿದೆ.