Sunday, January 19, 2025
ಸುದ್ದಿ

ಯಕ್ಷಗಾನ ಕಲಾವಿದನಿಗೆ ‘ನೆಲೆ’ ಕಲ್ಪಿಸಿದ ತೆಂಕ ಮಿಜಾರು ಗ್ರಾ.ಪಂ. – ಕಹಳೆ ನ್ಯೂಸ್

ಬಜಪೆ: ಸಮ್ಮಾನಿಸುವುದು, ಗೌರವಿಸುವುದು ಒಳ್ಳೆಯ ಕೆಲಸ. ಕಷ್ಟದಲ್ಲಿನ ಬದುಕಿಗೆ ಒಂದು ಸಮ್ಮಾನ, ಗೌರವ ಒಂದಷ್ಟು ಸಮಾಧಾನ- ಸುಖ ತಂದುಕೊಡುವುದಾದರೆ ಎಷ್ಟು ಖುಷಿಯಾಗದು. ಅದೇ ಕೆಲಸವನ್ನು ತೆಂಕ ಮಿಜಾರು ಗ್ರಾಮ ಪಂಚಾಯತ್‌ ಯಕ್ಷಗಾನ ಕಲಾವಿದ ಮಿಜಾರು ತಿಮ್ಮಪ್ಪರಿಗೆ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಪೂರೈಸಿದೆ.

ಮಿಜಾರು ತಿಮ್ಮಪ್ಪ ಅವರಿಗೆ ಮಿಜಾರು ಅಣ್ಣಪ್ಪ ನಗರದಲ್ಲಿ ನಿವೇಶನವಲ್ಲದೇ, ಮನೆಯನ್ನೂ ಕಟ್ಟಿಕೊಡುವ ಮೂಲಕ ಗ್ರಾಮ ಪಂಚಾಯತ್‌ ತನ್ನನ್ನು ತಾನು ಗೌರವಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನದಲ್ಲಿ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಿಜಾರು ತಿಮ್ಮಪ್ಪ ಅವರು ನಿರಂತರ 12 ವರ್ಷಗಳಿಂದ ಸುಂಕದಕಟ್ಟೆ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು, ಅರುವ, ಬಪ್ಪನಾಡು, ಕರ್ನಾಟಕ ಮೇಳದಲ್ಲಿ ಸೇವೆ
ಸಲ್ಲಿಸಿದ್ದರು. ಮುಚ್ಚಾರು ಸ್ತ್ರೀ ಪಾತ್ರಧಾರಿ ಹರೀಶ್‌ ಶೆಟ್ಟಿಗಾರ್‌ ಅವರು ನಾಟ್ಯ, ಮಿಜಾರು ಅಣ್ಣಪ್ಪ ಅವರ ಮಾರ್ಗದರ್ಶನ, ಬಂಟ್ವಾಳ್‌ ಜಯರಾಮ ಆಚಾರ್ಯ ಅವರ ಸಲಹೆಗಳಿಂದ ಯಕ್ಷಗಾನದಲ್ಲಿ ಬೆಳೆದರು.

ಒಂಬತ್ತನೇ ತರಗತಿಯಲ್ಲಿ ಶುಲ್ಕ ಪಾವತಿಸದೇ ಶಾಲೆ ಬಿಡಬೇಕಾಯಿತು. ಬಳಿಕ ಸಾಣೂರಿನ ರೈಸ್‌ ಮಿಲ್‌ನಲ್ಲಿ
ತಮ್ಮನೊಂದಿಗೆ 3 ತಿಂಗಳು ದುಡಿದು ಫೀಸ್‌ ಕಟ್ಟಿ ಎಸೆಸೆಲ್ಸಿಯಲ್ಲಿ ಪ್ರಥಮ ದರ್ಜೆ ಉತ್ತೀರ್ಣರಾಗಿದ್ದರು.

ಬದುಕಿಗೆ ಹೊಸ ಚೈತನ್ಯ ಗ್ರಾ.ಪಂ. ಗೌರವಕ್ಕೆ ಕೃತಜ್ಞತೆ ಸಲ್ಲಿಸಿರುವ ಮಿಜಾರು ತಿಮ್ಮಪ್ಪ, ಇಲ್ಲಿಯ ದಡ್ಡಿಯಲ್ಲಿ ಬಾಡಿಗೆ ಮನೆಯಲ್ಲಿದ್ದೆ. ಆರ್ಥಿಕ ಪರಿಸ್ಥಿತಿ ಕಠಿನವಾಗಿದ್ದರಿಂದ ನನ್ನದೇ ಜಾಗ ಹಾಗೂ ಮನೆ ಮಾಡಲು ಆಗಿರಲಿಲ್ಲ. ಹಾಸ್ಯ ಕಲಾವಿದನಾಗಿ ದುಡಿಯುತ್ತಿದ್ದೇನೆ. ನನಗೀಗ 55 ವರ್ಷ. ತೆಂಕ ಮಿಜಾರು ಗ್ರಾ.ಪಂ. ನನಗೆ ನಿವೇಶನ ನೀಡಿ, ಮನೆ ಕಟ್ಟಿ ಕೊಟ್ಟಿದೆ. ಮಾ. 30ರಂದು ಗೃಹ ಪ್ರವೇಶ. ಯಕ್ಷ ಚೇತನವೆಂದು ಹೆಸರು ಇಟ್ಟಿದ್ದೇನೆ. ಇದು ಬದುಕಿಗೆ ಹೊಸ
ಚೈತನ್ಯ ನೀಡಿದೆ ಎನ್ನುತ್ತಾರೆ.

ಯಕ್ಷಗಾನ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ಹೆಸರು ಶಾಶ್ವತ ವಾಗಿರಿಸಲು ತೆಂಕ ಮಿಜಾರು ಗ್ರಾ.ಪಂ. ತನ್ನ ಸಭೆಯಲ್ಲಿ ನಿರ್ಣಯ ಕೈಗೊಂ ಡು 2017ರಲ್ಲಿ ‘ಮಿಜಾರು ಅಣ್ಣಪ್ಪ ನಗರ’ ಎಂದು ತನ್ನ ವ್ಯಾಪ್ತಿಯ ಬಡಾ ವಣೆಯೊಂದಕ್ಕೆ ಹೆಸರಿಟ್ಟಿತು. ಇಲ್ಲಿ ಸುಮಾರು 80 ಮಂದಿಗೆ ಹಕ್ಕು ಪತ್ರ ನೀಡಲಾಗಿದೆ. ಪ್ರಸ್ತುತ 50ಕ್ಕಿಂತ ಹೆಚ್ಚು ಮನೆಗಳು ನಿರ್ಮಾಣಗೊಂಡಿದ್ದು, ಕೆಲವು ಪ್ರಗತಿಯಲಿವೆ.

ಗ್ರಾಮಸಭಾ ಗೌರವ
ಐದು ವರ್ಷಗಳಿಂದ ಪ್ರತಿ ಗ್ರಾಮ ಸಭೆಯಲ್ಲಿ ಪಂ. ವ್ಯಾಪ್ತಿಯಲ್ಲಿ ಹೆಸರು ಗಳಿಸಿದ ಕಲಾವಿದರನ್ನು, ಕೃಷಿಕರನ್ನು ಹಾಗೂ ಸೈನಿಕರನ್ನು ಗುರುತಿಸಿ ಗ್ರಾಮ ಸಭಾ ಗೌರವ ನೀಡಿ ಅಭಿನಂದಿಸುತ್ತಿದೆ. ಈ ಗೌರವ ಪಡೆದವರಲ್ಲಿ ಮಿಜಾರು ಅಣ್ಣಪ್ಪ , ರಥ ಶಿಲ್ಪಿ ಅಶ್ವತ್ಥಪುರ ಬಾಬುರಾಯ ಆಚಾರ್ಯ, ನಾಟಿ ವೈದ್ಯೆ ಕಡ್ಪಲಗುರಿಯ ದೊಂಬಿಬಾಯಿ, ಸೈನಿಕರಾದ ಎಂ.ಜಿ. ಮಹಮ್ಮದ್‌, ಜೋಸೆಫ್‌ ಪಿರೇರಾ, ಮಿಜಾರುಗುತ್ತು ಭಗವಾನ್‌ ದಾಸ್‌ ಶೆಟ್ಟಿ, ಕೃಷಿಕ ಅರೆಮಜಲು ಪಲ್ಕೆ ರಾಜುಗೌಡ ಪ್ರಮುಖರು.

ಮಿಜಾರಿಗೆ ಕೀರ್ತಿ ತಂದವರಿಗೆ ಗೌರವ 
ಮಿಜಾರು ಹೆಸರಿಗೆ ಕೀರ್ತಿ ತಂದ ಯಕ್ಷಗಾನದ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ಅವರ ಹೆಸರನ್ನು ಬಡಾವಣೆಗೆ ಇಟ್ಟಿದ್ದೇವೆ. ಇನ್ನೊಬ್ಬ ಹಾಸ್ಯ ಕಲಾವಿದ ಮಿಜಾರು ತಿಮ್ಮಪ್ಪ ಅವರ ಆರ್ಥಿಕ ಪರಿಸ್ಥಿತಿ ಗಮನಿಸಿ ನಿವೇಶನ ಮತ್ತು ಮನೆ ಕಟ್ಟಿಸಿಕೊಡಲಾಗಿದೆ. ಇದರಿಂದ ಮಿಜಾರು ಹೆಸರಿನೊಂದಿಗೆ ಯಕ್ಷಗಾನ ಕಲಾವಿದನಿಗೆ ಸಹಾಯ ಮಾಡಿದಂತಾಗಿದೆ.
– ಬಾಲಕೃಷ್ಣ ದೇವಾಡಿಗ,
ಅಧ್ಯಕ್ಷ ಗ್ರಾ.ಪಂ., ತೆಂಕ ಮಿಜಾರು