Friday, November 22, 2024
ಬೆಂಗಳೂರು

ಜನವರಿ 1ರಿಂದ ಬಿಎಂಟಿಸಿ ಎಸಿ ಬಸ್‍ಗಳ ಟಿಕೆಟ್ ದರ ಇಳಿಕೆ-ಕಹಳೆ ನ್ಯೂಸ್

ಬೆಂಗಳೂರು : ಜನವರಿ 1 ರಿಂದ ಎಸಿ ಬಸ್‍ಗಳ ಟಿಕೆಟ್ ದರವನ್ನು ಕಡಿಮೆ ಮಾಡಲು ಬಿಎಂಟಿಸಿ ಮುಂದಾಗಿದ್ದು, ನಗರದಲ್ಲಿ 80 ಎಸಿ ಬಸ್‍ಗಳ ಸಂಚಾರ ಆರಂಭಿಸಿ, ಎಸಿ ಬಸ್‍ಗಳ ಟಿಕೆಟ್ ದರ ಕಡಿಮೆ ಮಾಡಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವುದು ಬಿಎಂಟಿಸಿ ಆಲೋಚನೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕೊರೊನಾ ಲಾಕ್‍ಡೌನ್ ಶುರುವಾದಾಗಿನಿಂದ ಸಾಮಾನ್ಯ ಬಸ್‍ಗಳು ಕೂಡ ಸ್ಥಗಿತಗೊಂಡಿದ್ದವು. ಎಸಿ ಬಸ್‍ಗಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಮತ್ತು ಟಿಕೆಟ್ ದರ ಹೆಚ್ಚಿರುವುದರಿಂದ ಪ್ರಯಾಣಿಕರು ಎಸಿ ಬಸ್‍ಗಳಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದರು. ಅದಕ್ಕೆ ಉಪಾಯ ಕಂಡುಕೊಂಡಿರುವ ಬಿಎಂಟಿಸಿ ಟಿಕೆಟ್ ದರವನ್ನು ಇಳಿಸಲು ಮುಂದಾಗಿದೆ. ಅದು ಈ ಜನವರಿ 1 ರಿಂದ ಜಾರಿಗೆ ಬರಲಿದೆ. ಶೇ.20ರಷ್ಟು ಟಿಕೆಟ್ ದರವನ್ನು ಇಳಿಸಲಾಗುತ್ತಿದೆ. ಆದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಸಾಮಾನ್ಯ ಮತ್ತು ವಜ್ರ ಬಸ್‍ಗಳ ಟಿಕೆಟ್ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು