Friday, September 20, 2024
ಸುದ್ದಿ

ಕೊನೆಗೂ ಪುತ್ತೂರಿಗೆ ಲಭಿಸಲಿಲ್ಲ ಇಂದಿರಾ ಕ್ಯಾಂಟಿನ್ ಭಾಗ್ಯ..! ನನಸಾಗದ ಶಕ್ಕು ಅಕ್ಕನ ಕನಸು – ಕಹಳೆ ನ್ಯೂಸ್

ನಗರ: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸುವ ರಾಜ್ಯ ಸರಕಾರದ ಯೋಜನೆಯ ಭಾಗವಾಗಿ ಪುತ್ತೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗೆ ಜಾಗ ಗೊತ್ತುಪಡಿಸಿ, ನೆಲ ಸಮತಟ್ಟು ಮಾಡಲಾಗಿತ್ತು. ಮಂಗಳವಾರದಿಂದ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಇಂದಿರಾ ಕ್ಯಾಂಟೀನ್‌ ಆರಂಭಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದ್ವಾರದ ಬಳಿಯಲ್ಲೇ ಇಂದಿರಾ ಕ್ಯಾಂಟೀನ್‌ ಗೆ ಜಾಗ ಗೊತ್ತುಪಡಿಸಲಾಗಿ, ಸಮತಟ್ಟು ಮಾಡುವ ಸಂದರ್ಭ, ಅತೀ ಶೀಘ್ರ ಇಂದಿರಾ ಕ್ಯಾಂಟೀನ್‌ ಕೆಲಸ ಆರಂಭಗೊಳ್ಳಲಿದೆ ಎಂದು ಶಾಸಕಿ ಭರವಸೆ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಎರಡೇ ದಿನ ಸಾಕಿತ್ತು!
ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಎರಡೇ ದಿನ ಸಾಕು. ಸ್ಸ್ಲ್ಯಾಬ್ ಗಳನ್ನು ತಂದು ನೆಡುವುದಷ್ಟೇ. ಗೋಡೆ ಕಟ್ಟುವ ಪ್ರಶ್ನೆಯೇ ಇಲ್ಲ. ಎರಡೇ ದಿನಗಳಲ್ಲಿ ಕಟ್ಟಡ ತಲೆ ಎತ್ತುತ್ತದೆ. ಬಳಿಕ ಕ್ಯಾಂಟೀನ್‌ ಕೆಲಸ ಶುರು ಎಂದೇ ಹೇಳಲಾಗಿತ್ತು. ಪುತ್ತೂರು ಪೇಟೆಯಲ್ಲಿ ಜಾಗದ ಕೊರತೆ ತುಂಬಾ ಇದೆ. ಇಂದಿರಾ ಕ್ಯಾಂಟೀನ್‌ಗೆ ಜಾಗ ಹುಡುಕುವುದೇ ದೊಡ್ಡ ಸವಾಲಾಗಿತ್ತು. ಕೊನೆಗೂ ಬಿಇಒ ಕಚೇರಿ ಬಳಿಯಲ್ಲೇ ಸಣ್ಣ ಜಾಗ ಗೊತ್ತುಪಡಿಸಲಾಯಿತು.

ಶೀಘ್ರ ಗುದ್ದಲಿ ಪೂಜೆ ನೆರವೇರಿಸುವಂತೆ ಆಗ್ರಹ ವ್ಯಕ್ತವಾಯಿತು. ಸಾಕಷ್ಟು ವಿಳಂಬವಾಗಿ ಕೊನೆಗೂ ಜಾಗ ಸಮತಟ್ಟು ಮಾಡಲಾಯಿತು. ಅದಾಗಿ ಎರಡು ತಿಂಗಳು ಕಳೆದರೂ ಗುದ್ದಲಿ ಪೂಜೆ ನೆರವೇರಿಲ್ಲ. ಎರಡು ದಿನ ಬಿಡಿ, ಎರಡು ತಿಂಗಳು ಕಳೆದರೂ ಇಂದಿರಾ ಕ್ಯಾಂಟೀನ್‌ ನಿರ್ಮಾಣಗೊಳ್ಳದೆ, ಕಡಿಮೆ ಬೆಲೆಯ ಆಹಾರ- ತಿಂಡಿ ಹೇಗಿರಲಿದೆ ಎಂಬ ರುಚಿಯೂ ಸಾರ್ವಜನಿಕರಿಗೆ ತಿಳಿಯದಂತಾಯಿತು.

ನಿಧಾನವಾದ ಕಾರ್ಯಗಳು
ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ಹೊರಡಿ ಸಲಾಗಿದೆ ಎಂದಿದ್ದರು. ಆದರೆ ಕ್ಯಾಂಟೀನ್‌ ತಲೆ ಎತ್ತಲೇ ಇಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ದೊಡ್ಡ ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಿವೆ. ಆದರೆ, ಪುತ್ತೂರಿನಲ್ಲಿ ಪ್ರಕ್ರಿಯೆಯ ವಿಳಂಬದಿಂದಾಗಿ ಅದು ಕಾರ್ಯಗತವಾಗಲೇ ಇಲ್ಲ.

ಇನ್ನು ಅಸಾಧ್ಯ – ಶಕುಂತಳಾ ಟಿ. ಶೆಟ್ಟಿ

Shakunthala T Shetty
Shakunthala T Shetty

ಪುತ್ತೂರಿನಲ್ಲೂ ಇಂದಿರಾ ಕ್ಯಾಂಟೀನ್‌ ಮಾಡಬೇಕೆಂಬ ಆಸೆ ತುಂಬಾ ಇತ್ತು. ನೀತಿ ಸಂಹಿತೆ ಪ್ರಕಟ ಆಗುವ ಒಂದು ದಿನದ ಮೊದಲು ಈ ಬಗ್ಗೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಇನ್ನು ಅಸಾಧ್ಯವೇ ಸರಿ.
– ಶಕುಂತಳಾ ಟಿ. ಶೆಟ್ಟಿ,
ಶಾಸಕಿ