Monday, January 20, 2025
ಬೆಂಗಳೂರು

ಬೆಂಗಳೂರಿನಲ್ಲಿ ಇಂದು ‘ಮಧ್ಯಾಹ್ನ 12’ರಿಂದಲೇ ನಿಷೇಧಾಜ್ಞೆ ಜಾರಿ – ಕಮೀಷನರ್ ‘ಕಮಲ್ ಪಂತ್’ ಹೊಸ ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಇಂದು ಮಧ್ಯಾಹ್ನದಿಂದಲೇ ಬೆಂಗಳೂರು ಲಾಕ್ ಆಗಲಿದೆ. ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸಂಜೆ 6ರ ಬದಲು ಮಧ್ಯಾಹ್ನ 12ರಿಂದ ನಿಷೇಧಾಜ್ಞೆ ಬೆಂಗಳೂರಿನಲ್ಲಿ ಜಾರಿಯಾಗಲಿದೆ.

ಈ ಸಂಬಂಧ ಹೊಸ ಆದೇಶ ಹೊರಡಿಸಿರುವಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಬೆಂಗಳೂರಿನಲ್ಲಿ ಇಂದು ಸಂಜೆ 6 ಗಂಟೆಯಿಂದ ನಿಷೇಧಾಜ್ಞೆ ಜಾರಿಗೊಳಿಸಿದ್ದರ ಬದಲಾಗಿ, ಮಧ್ಯಾಹ್ನ 12ರಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಯಾಗಲಿದ್ದು, ರಾತ್ರಿ 10 ಗಂಟೆಯ ನಂತ್ರ ಬೆಂಗಳೂರಿನ ಎಲ್ಲಾ ಫ್ಲೈ ಓವರ್ ಗಳು ಬಂದ್ ಆಗಲಿವೆ. ಬೆಂಗಳೂರಿನಾದ್ಯಂತ ಪೊಲೀಸರ ಹದ್ದಿನ ಕಣ್ಣು ನೆಟ್ಟಿದ್ದು, ನಿಯಮ ಉಲ್ಲಂಘಿಸಿದ್ರೆ ಐಪಿಸಿ ಸೆಕ್ಷನ್ 188, ಎನ್ ಡಿ ಎಂ ಎ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಿದ್ದಾರೆ.
ಬೆಂಗಳೂರಿನ 15 ಕಡೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಪ್ರಮುಖ ರಸ್ತೆಗಳು ಬಂದ್ ಮಾಡಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಮಾರ್ಗೋಸ್ ರೋಡ್, ರೆಸಿಡೆನ್ಸಿ ರೋಡ್, ಇಂದಿರಾ ನಗರ ರೋಡ್, ಕಬ್ಬನ್ ಪಾರ್ಕ್ ರೋಡ್ ಸೇರಿ 15 ಕಡೆ ನಿರ್ಬಂಧ ಹೇರಲಾಗಿದೆ. ಎಂ.ಜಿ.ರಸ್ತೆ ಸುತ್ತಾ ಮುತ್ತಾ ರಾತ್ರಿ 8ರಿಂದ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಎಂ.ಜಿ ರಸ್ತೆ ಸುತ್ತಾಮುತ್ತಾ 15 ಕಡೆ ಪಾರ್ಕಿಂಗ್ ನಿಷೇಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು