Friday, November 22, 2024
ಸುದ್ದಿ

ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕಠಿವಾಣ; ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ – ಕಹಳೆ ನ್ಯೂಸ್

ಮಂಗಳೂರು :ಮಂಗಳೂರು ನಗರ ಪೊಲೀಸ್‌ ಆಯುಕ್ತ ವಿಕಾಸ್‌‌ ಕುಮಾರ್‌ ಅವರು ನಗರದಲ್ಲಿ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮಂಗಳೂರು ನಗರದಾದ್ಯಂತ 144 ಸೆಕ್ಷನ್‌ ಜಾರಿಯಲ್ಲಿರುತ್ತದೆ ಎಂದು ಆದೇಶ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಆದೇಶ ಇಂದು ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ. ಹೊಸ ವರ್ಷಚರಣೆಯ ನೆಪದಲ್ಲಿ ಐದಕ್ಕಿಂದ ಹೆಚ್ಚು ಜನ ಸೇರುವುದು, ಸಾರ್ವಜನಿಕ ಸ್ಥಳ, ರಸ್ತೆ, ಬೀಚ್‌‌‌ ಮತ್ತು ಮೈದಾನಗಳಲ್ಲಿ ಹೊಸ ವರ್ಷಾಚರಣೆ, ಜನ ಸೇರಿಸಿ ಹೊಸ ವರ್ಷ ಆಚರಣೆ ಮಾಡುವುದಕ್ಕೆ ಸಂಪೂರ್ಣ ನಿರ್ಭಂಧ ಹೇರಲಾಗಿದ್ದು, ವಸತಿ ಸಮುಚ್ಚಯ, ಖಾಸಗಿ ಕ್ಲಬ್‌‌‌ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ. ಹಾಗೆಯೇ ಹೊಟೇಲ್‌‌‌‌, ಬಾರ್‌, ಪಬ್‌‌, ಮಾಲ್‌ಗಳಲ್ಲಿ ಡಿಜೆ, ಮ್ಯೂಸಿಕಲ್‌‌‌ ನೈಟ್‌‌ಗಳಿಗೆ ನಿಬಂಧ, ಇವುಗಳಲ್ಲಿ ಪ್ರತಿನಿತ್ಯದ ವ್ಯವಹಾರಕಷ್ಟೇ ಅನುಮತಿ ಎಂದು ತಿಳಿಸಿದ್ದಾರೆ. ಇನ್ನು, ಹೆಚ್ಚು ಹೊತ್ತು ಜನರು ನಿಲ್ಲದಂತೆ, ವ್ಯವಹಾರ ನಡೆಸಲು ಹೊಟೇಲ್‌‌, ಪಬ್‌ ಮತ್ತು ಬಾರ್‌ಗಳಿಗೆ ಸೂಚನೆ ನೀಡಿದ್ದು, ಕಾನೂನು ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು