ಬೆಂಗಳೂರು : ಮುಂದಿನ ದಸರಾ ನನ್ನ ನೇತೃತ್ವದಲ್ಲೇ
ನಡೆಸುವುದಾಗಿ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿತ ಬಿಎಸ್‌ವೈ ‘ಮುಂದಿನ ದಸರಾ ಯಾರು ನಡೆಸಬೇಕೆನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ದೈವ ಬಲ ಮತ್ತು ಜನ ಬಲ ನಮ್ಮ ಪರವಾಗಿದ್ದು ನನ್ನ ನೇತೃತ್ವದಲ್ಲೇ ದಸರಾ ನಡೆಸುವ ವಿಶ್ವಾಸವಿದೆ’ ಎಂದರು.
ದಸರಾ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ‘ಮುಂದಿನ ದಸರಾ ನಾವೇ ಮಾಡುವುದು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ನನ್ನ ನೇತೃತ್ವದಲ್ಲೇ ಚುನಾವಣೆ ನಡೆಸುವುದು’ ಎಂದಿದ್ದರು.