Recent Posts

Sunday, January 19, 2025
ಬೆಂಗಳೂರು

ಹಣ ಕಿತ್ಕೊಂಡು, ಚಿಕಿತ್ಸೆಯನ್ನೂ ನೀಡದೇ ನಡುರಸ್ತೆಯಲ್ಲಿ‌ ನನ್ನ ಅಜ್ಜಿನ ಸಾಯಿಸಿದ್ರು; ಮೈಸೂರಿನ ವೈದ್ಯರ ಬೇಜವಾಬ್ದಾರಿಗೆ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಆಕ್ರೋಶ- ಕಹಳೆ ನ್ಯೂಸ್

ಬೆಂಗಳೂರು : ಕೊರೊನಾದಂತಹ ಸಂದರ್ಭದಲ್ಲಿ ಕೆಲ ವೈದ್ಯರು ಮೆರೆಯುತ್ತಿರುವ ಬೇಜವಾಬ್ದಾರಿ ವಿರುದ್ಧ ಕಿಡಿಕಾರಿರುವ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ , ವೈದ್ಯರು ಸೂಕ್ತ ಸಮಯದಲ್ಲಿ ಸರಿಯಾದ ಬೆಡ್ ಮತ್ತು ಚಿಕಿತ್ಸೆ ನೀಡದೆ ನಮ್ಮ ಅಜ್ಜಿಯನ್ನು ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಪ್ರಥಮ್, ಕೊರೊನಾ ಸಮಯದಲ್ಲಿ 2000 ಕ್ಕೂ ಹೆಚ್ಚು ಕುಟುಂಬ , ವೈದ್ಯರಿಗೆ ಪ್ರಾಮಾಣಿಕವಾಗಿ ಕಿಟ್ ತಲುಪಿಸಿದ ನನ್ನ ಕುಟುಂಬದ ಸ್ವಂತ ಅಜ್ಜಿಗೆ ಇಂದು ಬೆಡ್ ಕೊಡದೆ ರಾತ್ರಿಯಿಡೀ ರಸ್ತೆಯಲ್ಲಿ ನರಳಿಸಿ ಸಾಯಿಸಿದ್ರು. ಮೈಸೂರಿನ ರಾಕ್ಷಸ ವೈದ್ಯ ಸಿಬ್ಬಂದಿ 40 ಸಾವಿರ ಕಿತ್ಕೊಂಡು ಮಧ್ಯರಾತ್ರಿ ಅಸ್ವತ್ರೆಯಿಂದ ನಮ್ಮಜ್ಜಿನ ಓಡಿಸಿ, ಸಾಯಿಸಿದ ವೈದ್ಯಕೀಯ ಲೋಕಕ್ಕೆ ನಾಚಿಕೆಯಾಗ್ಬೇಕು ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.