Recent Posts

Sunday, January 19, 2025
ಬೆಂಗಳೂರು

ಗುಜರಾತ್ ನ ಮಾದರಿಯಲ್ಲಿ ವಿದ್ಯುತ್ ಉತ್ಪಾದಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ ಚಿತ್ರನಟ ಅನಿರುದ್ಧ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಮುಂದಾದ ಮಾದರಿಯಂತೆ ರಾಜ್ಯದಲ್ಲಿಯೂ ಸಹ ತೆರೆದ ಕಾಲುವೆಗಳನ್ನು ಮುಚ್ಚಬೇಕು ಎಂದು ಚಿತ್ರನಟ, ಜೊತೆಜೊತೆಯಲಿ ಖ್ಯಾತಿಯ ನಟ ಅನಿರುದ್ಧ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುಜರಾತ್ ರಾಜ್ಯದಲ್ಲಿ ತೆರದ ಕಾಲುವೆಗಳನ್ನು ಮುಚ್ಚಿ ಸೌರಫಲಕಗಳನ್ನು ಬಳಸಿ, ಎರಡೂ ಬದಿಯಲ್ಲಿ ಗೋಡೆಗಳನ್ನು ನಿರ್ಮಿಸಿ ವರ್ಟಿಕಲ್ ಗಾರ್ಡನಿಂಗ್‌ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿಯೂ ಸಹ ಅದೇ ಮಾದರಿಯಲ್ಲಿ ತೆರದ ಕಾಲುವೆಗಳನ್ನು ಮುಚ್ಚಿ ಗುಜರಾತ್ ಮಾದರಿಯ ವಿದ್ಯುತ್ಚ್ಛಕ್ತಿ ಉತ್ಪಾದನೆಗೆ ಸೌರಫಲಕಗಳನ್ನು ಬಳಸಬಹುದು. ‌ಮತ್ತು ವರ್ಟಿಕಲ್ ಗಾರ್ಡಾನಿಂಗ್ ಮಾಡಬಹುದು. ಬರಡುಭೂಮಿಯಲ್ಲಿ ತೆರದ ಕಾಲುವೆಗಳನ್ನು ಮುಚ್ಚಿ ಸೌರ ವಿದ್ಯುತ್ ಅಳವಡಿಸುವುದರಿಂದ ಬೆಳೆ ಬೆಳೆದು, ನೆಲ ಹಸನು ಮಾಡಬಹುದು. ಮತ್ತು ಬರಡುಭೂಮಿಯಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಸೌರ ವಿದ್ಯುತ್ ಅಳವಡಿಸಿರುವುದರಿಂದ ಬೆಳೆ ಬೆಳೆದು, ನೆಲ ಹಸನು ಮಾಡಬಹುದು ಎಂದು ಸಲಹೆ ನೀಡಿದ್ದು, ಹೀಗೆ ತೆರದ ಕಾಲುವೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ಒಂದಡೆ ವಿದ್ಯುತ್ ಉತ್ಪಾದನೆ ಮತ್ತೊಂದೆಡೆ ಕೃಷಿ ಚಟುವಟಿಕೆಗಳೂ ಅನುಕೂಲವಾಗಲಿದೆ. ಸರ್ಕಾರ ಗುಜರಾತ್ ಮಾದರಿಯನ್ನು ‌ಒಮ್ಮೆ ಅವಲೋಕಿಸಿ ನಮ್ಮ ರಾಜ್ಯದಲ್ಲಿಯೂ ಸಹ ಈ ಬಗ್ಗೆ ಚಿಂತನೆ ನಡೆಸಬೇಕೆಂದು ಸರ್ಕಾರಕ್ಕೆ ಅನಿರುದ್ಧ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು