Recent Posts

Monday, January 20, 2025
ಉಡುಪಿ

ಉಡುಪಿಯ ರಸ್ತೆಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಹೊಸ ವರ್ಷದ ಸಂದೇಶ ಬರೆಯುವಾಗ ಭೀಕರ ಅಪಘಾತ; ಇಬ್ಬರು ಯುವಕರ ಸಾವು-ಕಹಳೆ ನ್ಯೂಸ್

ಉಡುಪಿ :ಉಡುಪಿಯ ಕಾರ್ಕಳದ ಮೀಯಾರು ಕಾಜರ ಬೈಲಿ ಎಂಬಲ್ಲಿ ಇಬ್ಬರು ಯುವಕರು ಹ್ಯಾಪಿ ನ್ಯೂ ಇಯರ್ ಎಂದು ರಸ್ತೆಯಲ್ಲಿ ಹೊಸ ವರ್ಷದ ಸಂದೇಶ ಬರೆಯುವಾಗ ವೇಗವಾಗಿ ಬಂದ ಈಕೋ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತಪಟ್ಟವರನ್ನು ಬಾಗಲಕೋಟೆಯವರಾದ ಶರಣ್ ಮತ್ತು ಸಿದ್ದು ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು