Sunday, November 24, 2024
ಪುತ್ತೂರು

ಅಂಬಿಕಾ ಪದವಿ ಪೂರ್ವ ಕಾಲೇಜು ನಿನ್ನೆ ಪುನರಾರಂಭ – ಕಹಳೆ ನ್ಯೂಸ್

ಕೋವಿಡ್-19ರ ಎಲ್ಲ ಶಿಸ್ತು, ನಿಯಮಾವಳಿಗಳಂತೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮುಖದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ, ಒಂದು ಬೆಂಚಿನಲ್ಲಿ ಮೂವರೇ ವಿದ್ಯಾರ್ಥಿಗಳು, ದಿನದಲ್ಲಿ ನಲವತ್ತೈದು ನಿಮಿಷಗಳ ನಾಲ್ಕು ತರಗತಿಗಳು, ತರಗತಿ ಮುಗಿದ ನಂತರ ಮತ್ತೆ ತರಗತಿ ಕೋಣೆಗಳನ್ನು ಸ್ವಚ್ಛಗೊಳಿಸುವಿಕೆ, ಕಾಟನ್ ಮಾಸ್ಕ್ ಕಡ್ಡಾಯ ಈ ಎಲ್ಲಾ ನಿಯಮಗಳಂತೆ, ಪಿ.ಯು.ಸಿ. ತರಗತಿಗಳನ್ನು ಆರಂಭಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.


ಸಂಸ್ಕೃತಿಯ ರಾಯಭಾರಿಗಳಾಗಿ, ಸಂಸ್ಕಾರ ಸಂಸ್ಕೃತಿಯಿಂದ ಭಾರತದ ಹಿರಿತನವನ್ನು ಉಳಿಸಿ ಮತ್ತೊಮ್ಮೆ ಭಾರತ ವಿಶ್ವಗುರುವಾಗುವಂತೆ ಶ್ರಮಿಸೋಣ. ಅದಕ್ಕೆ ಪೂರಕ ಕೆಲಸಗಳನ್ನು ಮಾಡೋಣ. ಅಂಬಿಕಾ ಇಂತಹ ಸಾಂಸ್ಕೃತಿಕ ರಾಯಭಾರಿಗಳನ್ನು ತಯಾರು ಮಾಡುವ ಸಾಧನೆಗೆ ಸಫಲತೆ ಸಿಗಲಿ ಎಂದು ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಯ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜರು ವಿದ್ಯಾರ್ಥಿಗಳಿಗೆ ನೂತನ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು.
ತರಗತಿಗಳು ಹೇಗೆ ನಡೆಯುತ್ತವೆ, ಆನ್‍ಲೈನ್, ಆಫ್‍ಲೈನ್ ಕ್ಲಾಸ್‍ಗಳ ಮಾಹಿತಿಯನ್ನು ಪ್ರಾಚಾರ್ಯರಾದ ರಾಜಶ್ರೀ ಎಸ್ ನಟ್ಟೋಜರು ನೀಡಿದರು ಹಾಗೂ ಶುಭ ಹಾರೈಸಿದರು. ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ದ್ವಿತೀಯ ಪಿ.ಯು.ಸಿ.ಯ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದ ಬಗ್ಗೆ ಹೆಮ್ಮೆಯನ್ನೂ ವ್ಯಕ್ತಪಡಿಸಿದರು. ಉಪಪ್ರಾಚಾರ್ಯರಾದ ಸತ್ಯಜಿತ್ ಉಪಾಧ್ಯಾಯ ಅವರು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿ ಮಿಥುನ್ ರಾಮ್‍ನ ಅಕಾಲಿಕ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸಿ ಎರಡು ನಿಮಿಷಗಳ ಮೌನ ಪ್ರಾರ್ಥನೆ ನಡೆಸಲಾಯಿತು. ಸಭೆಯಲ್ಲೂ ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು