Thursday, January 23, 2025
ಸುದ್ದಿ

ಮಂಗಳೂರಿನ ಅತ್ತಾವರ ಬಾಬುಗುಡ್ಡೆ ಶ್ರೀ ಬಬ್ಬು ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಖೋಟ ನೋಟು, ಕಾಂಡೋಮ್ ಹಾಕಿ ಕಿಡಿಗೇಡಿಗಳಿಂದ ವಿವಾದತ್ಮಕ ಬರಹ-ಕಹಳೆ ನ್ಯೂಸ್

ಮಂಗಳೂರು: ನಗರದ ವಿವಿಧ ದೈವಸ್ಥಾನದ ಕಾಣಿಕೆ ಹುಂಡಿಗಳಲ್ಲಿ ಕೀಡಿಗೇಡಿಗಳು ನಕಲಿ ನೋಟುಗಳಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಬರಹದಿದ್ದ ನಕಲಿ ನೋಟುಗಳು ಪತ್ತೆಯಾಗಿರುವ ಘಟನೆ ಮಂಗಳೂರು ನಗರದ ಅತ್ತಾವರದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದ ಕೆಲ ದೈವಸ್ಥಾನಗಳಲ್ಲಿ ಇದೇ ರೀತಿಯಲ್ಲಿ ಅವಹೇಳನಕಾರಿ ಬರಹ ಬರೆದಿರುವ ಕೃತ್ಯ ನಡೆದಿದ್ದು, ಇದೀಗ ನಗರದ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗಳೂರಿನ ಅತ್ತಾವರ ಬಾಬುಗುಡ್ಡೆ ಬಬ್ಬುಸ್ವಾಮಿ ಕ್ಷೇತ್ರ ಸೇರಿದಂತೆ ನಗರದ ಕೆಲ ದೈವಸ್ಥಾನದಲ್ಲಿ ಇಂತಹ ಪ್ರಕರಣ ನಡೆದಿದೆ ಎಂದು ಎನ್ನಲಾಗಿದೆ.

ಕ್ರೈಸ್ತ ಧರ್ಮ ಪ್ರತಿಪಶದಿಸಿ ಬರಹ ಬರೆದಿರುವ ದುಷ್ಕರ್ಮಿಗಳು, ಹಿಂದೂ ಧರ್ಮವನ್ನು ಅವಹೇಳನ ಮಾಡುವುದರ ಜೊತೆಗೆ ಬಳಸಿದ ಕಾಂಡೋಮ್ ನ್ನು ಕಾಣಿಕೆ ಡಬ್ಬಿಗೆ ಹಾಕುವ ವಿಕೃತಿಯನ್ನು ಮೆರೆದಿದ್ದಾರೆ ಮಂಗಳೂರಿನಲ್ಲಿ ಇಂತಹ ದುಷ್ಕøತ್ಯ ನಡೆದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.