ಕಡಬದ ಜ್ಯೂಸ್ ಸೆಂಟರ್ ಗೆ ಬಂದಿದ್ದ ಹುಡುಗಿಯ ಫೋಟೊ ತೆಗೆದ ಅನ್ಯಕೋಮಿನ ಜಿಹಾದಿ ಯುವಕ..! ಕಡಬದಲ್ಲಿ ಬಿಗುವಿನ ವಾತಾವರಣ ; ಸಿಡಿದೆದ್ದ ಹಿಂದೂ ಸಂಘಟನೆಗಳು – ಕಹಳೆ ನ್ಯೂಸ್
ಕಡಬ : ಜ್ಯೂಸ್ ಸೆಂಟರ್ ಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಫೋಟೊವನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕ ತೆಗೆದ ಘಟನೆಗೆ ಸಂಬಂಧಿಸಿ ಜ್ಯೂಸ್ ಸೆಂಟರ್ ಬಳಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದರು.
ಇಂದು ಸಂಜೆ ಈ ಘಟನೆ ನಡೆದಿದ್ದು,
ಅನ್ಯಕೋಮಿನ ವ್ಯಕ್ತಿ ಜ್ಯೂಸ್ ಸೆಂಟರ್ ಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಪೋಟೊ ತೆಗೆದು ತನ್ನ ವಾಟ್ಸಪ್ ನಲ್ಲಿ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸಹಿತ ಅನೇಕರು ಜಮಾಯಿಸಿದರು. ಅಂಗಡಿಯ ವ್ಯಕ್ತಿಗಳ ಮತ್ತು ಸೇರಿದ್ದ ಜನರ ಮಧ್ಯೆ ಮಾತಿನ ಚಕಮಕಿಯೂ ನಡೆದಿದೆ. ಘಟನೆಗೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಕಡಬ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಎರಡೂ ಧರ್ಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.