Recent Posts

Monday, January 20, 2025
ಬಂಟ್ವಾಳ

ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆ ಬಂಟ್ವಾಳ ಘಟಕ ಮತ್ತು ಬಂಟ್ವಾಳ ವಕೀಲರ ಸಂಘದ ಸಹಯೋಗದಲ್ಲಿ ಕಾನೂನು ಕಾರ್ಯಾಗಾರ-ಕಹಳೆ ನ್ಯೂಸ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆ ಬಂಟ್ವಾಳ ಘಟಕ ಮತ್ತು ಬಂಟ್ವಾಳ ವಕೀಲರ ಸಂಘದ ಸಹಯೋಗದಲ್ಲಿ ಕಾನೂನು ಕಾರ್ಯಾಗಾರ ನಿನ್ನೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾನೂನು ಕಾರ್ಯಗಾರದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್ ಕೈಯೂರು ಉದ್ಘಾಟಿಸಿ ಶುಭಹಾರೈಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆಯ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಅವರು ಕಾನೂನು ವೇದಿಕೆಯು ಜಿಲ್ಲೆಯ ಎಲ್ಲಾ ವಕೀಲರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು ರಚನೆಯಾದ ಸಂಸ್ಥೆ ಎಂದು ಮಾತನಾಡಿದರು. ಹಾಗೂ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಶುಭ ಹಾರೈಸಿದರು. ಮತ್ತು ಅಧ್ಯಕ್ಷತೆಯನ್ನು ಕಾನೂನು ವೇದಿಕೆಯ ಬಂಟ್ವಾಳ ಘಟಕದ ಅಧ್ಯಕ್ಷ ಸುರೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹಾಗೆಯೇ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಉಮೇಶ್‍ಕುಮಾರ್ ವೈ, ಪ್ರಧಾನ ಕಾರ್ಯದರ್ಶಿ ಬಿ. ಉದನೇಶ್ವರ್, ಸಂಘಟನಾ ಕಾರ್ಯದರ್ಶಿ ವೀರೇಂದ್ರ ಎಂ.ಸಿದ್ದಕಟ್ಟೆ ಉಪಸ್ಥಿತರಿದ್ದರು. ಉಪನ್ಯಾಸದ ಮೊದಲನೇ ಅವಧಿಯಲ್ಲಿ ಹಿರಿಯ ವಕೀಲ ಜಯರಾಮ ಪದಕಣ್ಣಾಯ ಕ್ರಿಮಿನಲ್ ಕೇಸುಗಳಲ್ಲಿ ಪಾಟಿ ಸವಾಲಿನ ಕೌಶಲ್ಯದ ಕುರಿತು ಸಲಹೆ ನೀಡಿದರು. ಎರಡನೇ ಅವಧಿಯಲ್ಲಿ ಹಿರಿಯ ವಕೀಲ ಪುಂಡಿಕಾಯಿ ನಾರಾಯಣ ಭಟ್ ಅವರು, ಸಿವಿಲ್ ಪ್ರಕ್ರಿಯೆ ಸಂಹಿತೆ ಹಾಗೂ ಸಿವಿಲ್ ದಾವೆ ಸಲ್ಲಿಸುವಾಗ ಅನುಸರಿಸಬೇಕಾದ ಮುಖ್ಯ ವಿಷಯಗಳ ಕುರಿತು ಮಾಹಿತಿ ನೀಡಿದರು. ನ್ಯಾಯಾವಾದಿಗಳಾದ ಸುರೇಶ್ ಪೂಜಾರಿ ಸ್ವಾಗತಿಸಿದರು. ಬಂಟ್ವಾಳ ಘಟಕದ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ವಂದಿಸಿದರು. ಮೋಹನ್ ಕುಮಾರ್ ಕಡೇಶ್ವಾಲ್ಯ ನಿರ್ವಹಿಸಿದರು. ಬಂಟ್ವಾಳ ವಕೀಲರ ಸಂಘ ಆಶ್ರಯದಲ್ಲಿ ಕಾನೂನು ಕಾರ್ಯಾಗಾರ ಉದ್ಘಾಟನೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು