Saturday, November 23, 2024
ಮೂಡಬಿದಿರೆ

ಸಾವಿತ್ರಿ ಬಾಯಿ ಫುಲೆಯ ಜನ್ಮದಿನವನ್ನು ಸ್ಮರಿಸಿದ ಮುಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಎ ಕೋಟ್ಯಾನ್- ಕಹಳೆ ನ್ಯೂಸ್

ಮೂಡಬಿದಿರೆ: ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ನಿರಾಕರಿಸಿದ ಸಮಾಜಕ್ಕೆ ಎದುರಾಗಿ, ನೋವು ಅವಮಾನಗಳನ್ನು ಮೆಟ್ಟಿನಿಂತು, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಾಲೆ ಪ್ರಾರಂಭಿಸಿ ಅಕ್ಷರ ಕಲಿಸಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವಾದ ಇಂದು, ಮುಲ್ಕಿ-ಮೂಡಬಿದಿರೆ ಶಾಸಕರಾದ ಉಮಾನಾಥ ಎ ಕೋಟ್ಯಾನ್‌ರವರು ಅಕ್ಷರಮಾತೆಯನ್ನ ಸ್ಮರಿಸಿ ನಮನಗಳನ್ನು ಅರ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಣ್ಣಿಗೆ ಶಿಕ್ಷಣ ನೀಡದ ಅಂದಿನ ಕಾಲದ ಸಮಾಜದಲ್ಲಿ, ಶಿಕ್ಷಣದೆಡೆ ಒಲವನ್ನು ಹೊಂದಿದ್ದ ಸಾವಿತ್ರಿಬಾಯಿ ಫುಲೆ ಮನೆಯನ್ನೇ ಪಾಠಶಾಲೆಯನ್ನಾಗಿಸಿ, ತಮ್ಮ ಪತಿ ಜ್ಯೋತಿ ಬಾ ಫುಲೆಯಿಂದ ಶಿಕ್ಷಣ ಪಡೆದು ಭಾರತದ ಅದೆಷ್ಟೋ ಮನೆಮಗಳಿಗೆ ಜ್ಞಾನವನ್ನ ಎರೆದವರು. ಇವತ್ತಿನ ಪ್ರತೀ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರೆ ಅದು ಸಾಧ್ಯ ಆಗಿರುವುದು ಸಾವಿತ್ರಿಬಾಯಿ ಫುಲೆಯವರಿಂದ. ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿ , ಜಾತಿ, ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ಭಾರತದ ಮೊಟ್ಟ ಮೊದಲ ಶಿಕ್ಷಕಿ, ಕ್ರಾಂತಿ ಜ್ಯೋತಿ, ಸಾವಿತ್ರಿಬಾಯಿಯವರು. ಅಂತಹ ಅಕ್ಷರದವ್ವನನ್ನು ಶಾಸಕ ಉಮಾನಾಥ ಎ ಕೋಟ್ಯಾನ್‌ರವರು ನೆನೆದು ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು