Thursday, January 23, 2025
ಪುತ್ತೂರು

ಸುಳ್ಯ:ಮದುವೆ ದಿಬ್ಬಣದ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಪುತ್ತೂರು ಬಲ್ನಾಡ್‍ನ ಐದು ಮಂದಿ ದುರ್ಮರಣ-ಕಹಳೆ ನ್ಯೂಸ್

ಪುತ್ತೂರು: ಕೇರಳದ ಪಾಣತ್ತೂರು ಎಂಬಲ್ಲಿ ಮದುವೆ ದಿಬ್ಬಣದ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಪುತ್ತೂರು ಬಲ್ನಾಡ್ ನ ಐದು ಮಂದಿ ಮೃತ ಪಟ್ಟಿರುವ ಘಟನೆ ನಿನ್ನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಲ್ನಾಡ್ ಗ್ರಾಮದ ಚನಿಲ ನಿವಾಸಿ ಕೊಗ್ಗು ನಾಯ್ಕ ರವರ ಪುತ್ರಿಯ ವಿವಾಹ ಕರಿಕಲ ಎಂಬಲ್ಲಿ ನಡೆಯುತ್ತಿದ್ದು, ಮದುವೆಗೆ ಹೋಗುತ್ತಿದ್ದ ವಧುವಿನ ದಿಬ್ಬಣದ ಬಸ್ ಪಾಣತ್ತೂರು ಎಂಬಲ್ಲಿ ಪಲ್ಟಿಯಾಗಿ 5 ಮಂದಿ ಮೃತಪಟ್ಟು, 3 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ಬಸ್‍ನಲ್ಲಿ ಭರ್ತಿ 60 ಮಂದಿ ಇದ್ದರು.

ಬಸ್ ಪಲ್ಟಿಯಾದ ಸಂದರ್ಭದಲ್ಲಿ ಮನೆಯೊಂದು ಬಿದಿದ್ದು, ಗಂಭೀರ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ಹಾಗೂ ಉಳಿದ ಗಾಯಾಳುಗಳನ್ನು ಕಾಂಞಗಾಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬಿಜೆಪಿ ಮುಖಂಡ, ಕ್ಯಾಂಪ್ಕೋ ಮಾಜಿ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ