Thursday, January 23, 2025
ಬಂಟ್ವಾಳ

ಭಾರತೀಯ ಜನತಾ ಪಾರ್ಟಿಯ ರಾಜ್ಯ ಎಸ್.ಸಿ.ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಅಯ್ಕೆ-ಕಹಳೆ ನ್ಯೂಸ್

ಬಂಟ್ವಾಳ: ಭಾರತೀಯ ಜನತಾ ಪಾರ್ಟಿಯ ರಾಜ್ಯ ಎಸ್.ಸಿ.ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಅಯ್ಕೆ ಆಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಹಾಗೂ ಜಿಲ್ಲಾಧ್ಯಕ್ಷ ಸುದರ್ಶನ್ ಅವರ ಪ್ರಸ್ತಾವನೆಯಂತೆ , ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಸೂಚನೆಯಂತೆ , ರಾಜ್ಯ ಎಸ್.ಸಿ.ಮೋರ್ಚಾ ರಾಜ್ಯಾಧ್ಯಕ್ಷ ಚೆಲುವಾದಿನಾರಾಯಣ ಸ್ವಾಮಿ ನೇಮಕ ಮಾಡಿ ಅದೇಶ ಮಾಡಿದ್ದಾರೆ. ಯುವ ರಾಜಕಾರಣಿ ಅಮ್ಟೂರು ಅವರು ಬೂತ್ ಸಮಿತಿ ಕಾರ್ಯದರ್ಶಿ, ಅಮ್ಟೂರು ಗ್ರಾ.ಸಮಿತಿ ಕಾರ್ಯದರ್ಶಿ ಯಾಗಿ, ವಿಟ್ಲ ವಿಧಾನಸಭಾ ಕ್ಷೇತ್ರದ ಸಮಿತಿ ಸದಸ್ಯರಾಗಿ, ಕಾರ್ಯದರ್ಶಿ ಯಾಗಿ, ಬಂಟ್ವಾಳ ಎಸ್.ಸಿ.ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಾಗಿ , ವಿಧಾನ ಸಭಾ ಕ್ಷೇತ್ರದ ಎರಡು ಬಾರಿ ಕಾರ್ಯದರ್ಶಿ ಯಾಗಿ , ಜಿಲ್ಲಾ ಎಸ್.ಸಿ.ಮೋರ್ಚಾದ ಜಿಲ್ಲಾಧ್ಯಕ್ಷರಾಗಿ , ಜಿಲ್ಲಾ ಕಾರ್ಯ ಕರಣಿ ಸದಸ್ಯ ರಾಗಿ ಪಕ್ಷ ಸಂಘಟನೆಯ ಲ್ಲಿ ಮುಂಚೂಣಿ ಯಲ್ಲಿರುವ ಅಮ್ಟೂರು ಅವರು ಇದೀಗ ಎಸ್.ಸಿ.ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ನೇಮಕವಾಗಿದ್ದಾರೆ. ಜೊತೆಗೆ ವಿವಿಧ ಸಂಘಟನೆಗಳಲ್ಲಿ ಮತ್ತು ಸಾಮಾಜಿಕ ಸಾಂಸ್ಕøತಿಕ ಶೈಕ್ಷಣಿಕ, ಧಾರ್ಮಿಕವಾಗಿ ತೊಡಗಿಸಿಕೊಂಡಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು