ನೆಲ್ಯಾಡಿಯಲ್ಲಿ ಮೈಗೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ-ಕಹಳೆ ನ್ಯೂಸ್
ನೆಲ್ಯಾಡಿ: ಯುವತಿಯೋರ್ವರು ಮೈಗೆ ಸೀಮೆಎಣ್ಣೆ ಸುರಿದು, ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿ ನವ್ಯಾ ಜೋಸೆಫ್, ನೆಲ್ಯಾಡಿ ನವೀನ್ ಇಂಟರ್‍ಲಾಕ್ ಮಾಲಕ, ನೆಲ್ಯಾಡಿ ನಿವಾಸಿ ವಿ.ಜೆ.ಜೋಸೆಫ್ ಎಂಬವರ ಪುತ್ರಿಯಾಗಿದ್ದು, ಇವರು ಕಳೆದ ಶೈಕ್ಷಣಿಕ ಸಾಲಿನಲ್ಲಿ ಮಂಗಳೂರು ಸೈಂಟ್ ಅಲೋಸಿಯಸ್ ಕಾಲೇಜಿನಲ್ಲಿ ಬಿಬಿಎ ಪದವಿ ಮುಗಿಸಿದ್ದ ನವ್ಯಾ ಜೋಸೆಫ್ ಬಳಿಕ ಮನೆಯಲ್ಲಿದ್ದರು. ನಿನ್ನೆ ರಾತ್ರಿ ತನ್ನ ಕೊಠಡಿಯೊಳಗೆ ಮಲಗಿದ್ದ ನವ್ಯಾ ಇಂದು ಬೆಳಗ್ಗೆ 8 ಗಂಟೆಯಾದರು ಬಾಗಿಲು ತೆರೆಯದೇ ಇದ್ದ ಕಾರಣ ಆಕೆಯ ಮೊಬೈಲ್‍ಗೆ ತಾಯಿ ಕರೆಮಾಡಿದರೂ ಸ್ವೀಕರಿಸಲಿಲ್ಲ. ಬಳಿಕ ತಂದೆ ವಿ.ಜೆ.ಜೋಸೆಫ್‍ರವರು ಬಾಗಿಲು ಮುರಿದು ಒಳಪ್ರವೇಶಿಸಿದ ವೇಳೆ ನವ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಆಕೆ ಮೈಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.