Recent Posts

Monday, January 20, 2025
ಹೆಚ್ಚಿನ ಸುದ್ದಿ

ಭಾರ್ಗವಿ ಬಿಲ್ಡರ್ಸ್‍ರವರ ನೂತನ ವೆಬ್‍ಸೈಟ್ www.bhargavibuilders.com ಲೋಕಾರ್ಪಣೆ ಮತ್ತು ನಿರ್ಮಾಣ್ ಹೋಮ್ಸ್ ಸಹಭಾಗಿತ್ವದಲ್ಲಿ ಶೀಘ್ರದಲ್ಲೇ ಕೊಟ್ಟಾರದಲ್ಲಿ ಕೈಲಾಶ್ ವಸತಿ ಸಮುಚ್ಚಯದ ಭೂಮಿ ಪೂಜೆ-ಕಹಳೆ ನ್ಯೂಸ್

ಮಂಗಳೂರಿನಲ್ಲಿ ಐಶಾರಾಮಿಯಾದ ಆದರೆ ಕೈಗೆಟುಕುವ ರೀತಿಯಲ್ಲಿ ಮನೆಗಳನ್ನು ನಿರ್ಮಿಸುವ ಸಂಸ್ಥೆ ನಿರ್ಮಾಣ್ ಹೋಮ್ಸ್ ಇದೀಗ ನಗರದ ಜನತೆಗೆ ಎಲ್ಲಾ ಸೌಕರ್ಯಗಳನ್ನೊಳಗೊಂಡ ಅಪಾರ್ಟ್‍ಮೆಂಟ್‍ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡಬೇಕೆನ್ನುವ ನಿಟ್ಟಿನಲ್ಲಿ ಭಾರ್ಗವಿ ಬಿಲ್ಡರ್ಸ್‍ರವರ ಸಹಭಾಗಿತ್ವದಲ್ಲಿ ಕೈಲಾಶ್ ಎಂಬ ವಸತಿ ಸಮುಚ್ಚಯವನ್ನು ಶೀಘ್ರದಲ್ಲೇ ಕೊಟ್ಟಾರದಲ್ಲಿ ನಿರ್ಮಾಣಗೊಳಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿರ್ಮಾಣ್ ಹೋಮ್ಸ್ ಸಂಸ್ಥೆಯು “ಎಫರ್ಡೇಬಲ್ ಲಕ್ಶುರಿ” ಎಂಬ ಧ್ಯೇಯವನ್ನು ಹೊಂದಿದ್ದರೆ, ಭಾರ್ಗವಿ ಬಿಲ್ಡರ್ಸ್ ಸಂಸ್ಥೆಯು “ಹೈ ಲಿವಿಂಗ್ ಲಕ್ಶುರಿ ಹೋಮ್ಸ್” ಅನ್ನು ಕೈಗೆಟುಕುವ ಬೆಲೆಯಲ್ಲಿ ಜನತೆಗೆ ನೀಡುವ ಧ್ಯೇಯವನ್ನು ಹೊಂದಿದೆ. ಇದರ ನಿಟ್ಟಿನಲ್ಲಿ ಭಾರ್ಗವಿ ಬಿಲ್ಡರ್ಸ್‍ರವರ ನೂತನ ವೆಬ್‍ಸೈಟ್ www.bhargavibuilders.com ಅನ್ನು 01.01.2021ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ಆಶೀರ್ವಾದದೊಂದಿಗೆ ಹಾಗೂ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಶುಭಾಶಯದೊಂದಿಗೆ ಲೋಕಾರ್ಪಣೆಗೊಳಿಸಲಾಯಿತು. ನಗರದ ಖ್ಯಾತ ಹಿರಿಯ ಪತ್ರಕರ್ತರಾದ ಶ್ರೀ ಮನೋಹರ್ ಪ್ರಸಾದ್‍ರವರು ನೂತನ ವೆಬ್‍ಸೈಟ್‍ನ್ನು ಲೋಕಾರ್ಪಣೆಗೊಳಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಭಾರ್ಗವಿ ಬಿಲ್ಡರ್ಸ್ ಮಂಗಳೂರಿನ ಜನತೆಯ ಅವಶ್ಯಕತೆಯನ್ನು ಮನಗೊಂಡು ಆಧುನಿಕ ಸೌಲಭ್ಯಗಳನ್ನೊಳಗೊಂಡ 2BHK ಮನೆಯನ್ನು 50 ಲಕ್ಷದೊಳಗೆ É ಪರಿಚಯಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ನುಡಿದು ಶುಭ ಹಾರೈಸಿದರು. ಭಾರ್ಗವಿ ಬಿಲ್ಡರ್ಸ್‍ನ ಮಾಲಕರಾದ ಭಾಸ್ಕರ್ ಗಡಿಯಾರ್, ಪ್ರೋಜೆಕ್ಟ್ ಹೆಡ್ ಗುರುದತ್ತ ಶೆಣೈ, ಮಹೇಶ್ ಶೆಟ್ಟಿ, ಮಂಗಲ್‍ದೀಪ್ ಮತ್ತಿತರು ಉಪಸ್ಥಿತರಿದ್ದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಭಾರ್ಗವಿ ಬಿಲ್ಡರ್ಸ್ ಸಂಸ್ಥೆಯು ಶೀಘ್ರದಲ್ಲೇ ಕೊಟ್ಟಾರದಲ್ಲಿ ಕೈಲಾಶ್ ವಸತಿ ಸಮುಚ್ಚಕ್ಕೆ ಶಿಲಾನ್ಯಾಸವನ್ನು ನೆರವೇರಿಸಲಿದೆ. ಈ ಅಪಾರ್ಟ್‍ಮೆಂಟ್‍ನಲ್ಲಿ ಉತ್ತಮ ಗುಣಮಟ್ಟದ ಸೌಕರ್ಯಗಳು ಲಭ್ಯವಾಗಲಿವೆ.

ಈ ಅಪಾರ್ಟ್‍ಮೆಂಟ್‍ನ ವಿಶೇಷತೆಯೆಂದರೆ ನಗರದಲ್ಲೇ ಪ್ರಪ್ರಥಮ ಬಾರಿಗೆ ಕಟ್ಟಡದ ತುದಿಯಲ್ಲಿ ಈಜು ಕೊಳವನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಣ ಮತ್ತು ಸೌಕರ್ಯ ಕಲ್ಪಿಸುವ ವಿಷಯದಲ್ಲಿ ಉತ್ತಮ ಹೆಸರು ಪಡೆದಿರುವ ಈ ಸಂಸ್ಥೆ 15 ಅಂತಸ್ತುಗಳನ್ನೊಳಗೊಂಡ 154 ಮನೆಗಳನ್ನು ವಾಸ್ತು ಪ್ರಕಾರದಲ್ಲಿ ನಿರ್ಮಿಸಲಿದೆ. ಪ್ರೀಲಾಂಚ್ ಆಫರ್ ಆಗಿ 2ಃಊಏ ಫ್ಲ್ಯಾಟ್ ಕೇವಲ 50 ಲಕ್ಷ ರೂಪಾಯಿಗಳಿಗೆ ಎಲ್ಲ ಸೌಕರ್ಯಗಳೊಂದಿಗೆ ಲಭ್ಯವಾಗಲಿದೆ. ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್ ಆನ್ ರೂಫ್ ಟಾಪ್ , ಮಿನಿ ತಿಯೇಟರ್,ಹವಾನಿಯಂತ್ರಿತ ಜಿಮ್ನಾಷಿಯಮ್, ಒಳಾಂಗಣ ಹಾಗೂ ಹೊರಾಂಗಣ ಆಟದ ತಾಣ, ಮಕ್ಕಳ ಆಟದ ತಾಣ
ಲೈಬ್ರೇರಿ, ಯೋಗಾ ಪೆವೀಲಿಯನ್, ವಿಶಾಲವಾದ ಡಬಲ್ ಹೈಟ್ ಹೋಂದಿರುವ ವಿಸಿಟರ್ಸ್ ಲೋಬಿ, ಇಂಟರ್‍ಕಾಮ್ ಮತ್ತು ಆ್ಯಕ್ಸೆಸ್ ಕಂಟ್ರೋಲ್ಡ್ ಲಾಬಿ ಎಚಿಟ್ರೆನ್ಸ್, ಸೋಲಾರ್ ಪ್ಯಾನೆಲ್ಸ್, ಸಿಸಿ ಟಿವಿ ಕ್ಯಾಮರಾ, ರೆಟಿಕ್ಯುಲೇಟೆಡ್ ಗ್ಯಾಸ್ ಕನೆಕ್ಷನ್, ಎರಡು ಸ್ವಯಂಚಾಲಿತ ಲಿಫ್ಟ್. ಕಾರ್ ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆ. ಕೈಲಾಶ್ ಫ್ಲ್ಯ್ಲಾಟ್‍ನ ಆಧುನಿಕ ಮಾದರಿಯ ಸೌಕರ್ಯಗಳಿವೆ. ಆರಂಭದಿಂದ ಈವರೆಗೆ ಐದು ವಸತಿ ಯೋಜನೆಗಳನ್ನು ಮತ್ತು ಒಂದು ವಾಣಿಜ್ಯ ಯೋಜನೆಗಳನ್ನು ಸರಿಯಾದ ಸಮಯಕ್ಕೆ ಮುಕ್ತಾಯಗೊಳಿಸಿದ ಈ ಸಂಸ್ಥೆಯ ಕೈಯಲ್ಲಿ ಈಗ ನಾಲ್ಕು ಯೋಜನೆಗಳು ಕಾರ್ಯಗತಿಯಲ್ಲಿವೆ. ಮಣ್ಣಗುಡ್ಡದಲ್ಲಿ ಗೋಕುಲ್‍ಧಾಮ್, ಕೊಟ್ಟಾರ ಚೌಕಿಯಲಿ ್ಲಕೈಲಾಶ್, ಕಾಪಿಕಾಡ್‍ನಲ್ಲಿ ಅಜಂತಾ ಬ್ಯುಸಿನೆಸ್ ಸೆಂಟರ್ ಮತ್ತು ದೇರೆಬೈಲ್ ನಲ್ಲಿ ಮಥುರಾ ಎಂಬ ವಸತಿ ಯೋಜನೆಯ ಕೆಲಸ ಮುಂದುವರೆಯುತ್ತಿದೆ. ಇದೀಗ ಕೈಲಾಶ್ ಅಪಾರ್ಟ್‍ಮೆಂಟ್‍ನ ಬುಕ್ಕಿಂಗ್‍ಗಾಗಿ ಗ್ರಾಹಕರು ನಗರದ ಕಾಪಿಕಾಡ್‍ನ ಸುಪ್ರಭಾತ್ ಬಿಲ್ಡಿಂಗ್‍ನಲ್ಲಿರುವ ಭಾರ್ಗವಿ ಬಿಲ್ಡರ್ಸ್ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ ಲಾಗ್ ಆನ್ ಮಾಡಿ: www.bhargavibuilders.com