Recent Posts

Monday, January 20, 2025
ಹೆಚ್ಚಿನ ಸುದ್ದಿ

ಕೊಯಿಲ ಮತ್ತು ರಾಮಕುಂಜ ಗ್ರಾಮ ವ್ಯಾಪ್ತಿಯ ಲೋ ವೋಲ್ಟೇಜ್ ಸಮಸ್ಯೆ ಬಗೆಹರಿಸುವಂತೆ ಪುತ್ತೂರು ಮೆಸ್ಕಾಂ ಇಲಾಖೆಗೆ ಎಸ್ಡಿಪಿಐ ಮನವಿ ಸಲ್ಲಿಕೆ-ಕಹಳೆ ನ್ಯೂಸ್

ರಾಮಕುಂಜ: ಕೊಯಿಲ ಮತ್ತು ರಾಮಕುಂಜ ಗ್ರಾಮ ವ್ಯಾಪ್ತಿಯ ಹಲವಾರು ಪ್ರದೇಶಗಳಿಗೆ ಲೋ ವೋಲ್ಟೇಜ್ ಸಮಸ್ಯೆ ಉದ್ಭವಿಸಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವಂತೆ ಪುತ್ತೂರು ಮೆಸ್ಕಾಂ ಇಲಾಖೆಗೆ ಎಸ್ಡಿಪಿಐ ಆತೂರು ವಲಯದ ವತಿಯಿಂದ ಮನವಿ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಎಸ್ಡಿಪಿಐ ಮುಂದಾಳು, ಗ್ರಾಮ ಪಂಚಾಯತ್ ಸದಸ್ಯ ಹಸನ್ ಸಜ್ಜಾದ್ ಅವರು, ಲೋ ವೋಲ್ಟೇಜ್ ಸಮಸ್ಯೆಯಿಂದಾಗಿ ಮನೆಯ ವಿದ್ಯುತ್ ಉಪಕರಣ ಸೇರಿದಂತೆ, ಕೃಷಿಯನ್ನೇ ಅವಲಂಬಿತರಾದ ರೈತರಿಗೆ ಪಂಪ್ ಸೆಟ್ ಮೂಲಕ ತೋಟಕ್ಕೆ ನೀರು ಹಾಯಿಸಲು ಕೂಡ ಕಷ್ಟಕರವಾಗಿದ್ದರಿಂದ ಹಲವಾರು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಹಾಗೆ ಈ ಬಗ್ಗೆ ಮೆಸ್ಕಾಂ ಇಲಾಖೆ ಶೀಘ್ರ ಸ್ವಂದಿಸದಿದ್ದಲ್ಲಿ ಎಸ್.ಡಿಪಿಐ ಪಕ್ಷವು ಗ್ರಾಮದ ಹಾಗೂ ಊರಿನ ನಾಗರಿಕರ ಜೊತೆಗೂಡಿ ಮೆಸ್ಕಾಂಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಸಿದರು. ಈ ವೇಳೆಯಲ್ಲಿ ಎಸ್.ಡಿಪಿಐ ಕಡಬ ತಾಲೂಕು ಜೊತೆ ಕಾರ್ಯದರ್ಶಿ ಬಶೀರ್ ಹಲ್ಯಾರ, ಎಸ್.ಡಿಪಿಐ ಆತೂರು ವಲಯಾಧ್ಯಕ್ಷ ಇಸ್ಮಾಯಿಲ್ ಆತೂರು, ಎಸ್.ಡಿಪಿಐ ವಲಯ ಸಮಿತಿ ಸದಸ್ಯ ಶರೀಫ್ ಬಿಎಸ್ ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು