Saturday, November 23, 2024
ಪುತ್ತೂರು

ವಿವೇಕಾನಂದ ಮಹಾವಿದ್ಯಾಲಯದಲ್ಲಿ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ- ಕಹಳೆ ನ್ಯೂಸ್

ನಮ್ಮೊಂದಿಗೆ ಸಮಾಜವನ್ನೂ ಬೆಳೆಸುವ ಸಂಕಲ್ಪ ಹುಟ್ಟಲಿ: ಮುರಳಿಕೃಷ್ಣ ಕೆ. ಎನ್. ಪುತ್ತೂರು: ಲಾಕ್‍ಡೌನ್ ಎಂಬುವುದು ಅನೇಕ ನಕಾರಾತ್ಮಕ ವಿಚಾರಗಳ ನಡುವೆಯೂ ಹಲವು ಧನಾತ್ಮಕ ವಿಷಯಗಳಿಗೂ ಕಾರಣವಾಗಿದೆ. ಯುವಜನತೆ ಸಮಾಜಮುಖಿಯಾಗಿ ಕಾರ್ಯಾರಂಭ ಮಾಡಲು ಮುನ್ನುಡಿಯಾಗಿದೆ. ಸೇವಾ ಭಾವನೆ ಬೆಳೆಯತೊಡಗಿದೆ. ನಾನೂ ಬದುಕಬೇಕು ನನ್ನೊಂದಿಗೆ ಸಮಾಜವೂ ಉಸಿರಾಡಬೇಕು ಎನ್ನುವ ಮನೋಭಾವ ಬೆಳೆಯುತ್ತಿದೆ ಎಂದು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಚಳ್ಳಂಗಾರು ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಮಾನವಿಕ ವಿಭಾಗಗಳು ಆಯೋಜಿಸಿದ್ದ ‘ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯ ವಿಕಸನ’ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಕೊರೊನಾ ತುರ್ತುಪರಿಸ್ಥಿತಿಯ ಸಮಯದಲ್ಲಿ, ಅನೇಕ ಬದಲಾವಣೆಗಳಾಗಿವೆ. ವೆಬಿನಾರ್‍ಗಳು, ಆನ್‍ಲೈನ್‍ಕ್ಲಾಸ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕಲಿಕೆಗೆ ಪೂರಕವಾಗಿ ಅನೇಕ ವಿಚಾರಗಳನ್ನು ಕಲಿತಿದ್ದೇವೆ. ತರಗತಿ ಪಠ್ಯಗಳ ಜೊತೆಗೆ ಜೀವನ ನಿರ್ವಹಣೆಗೆ ಬೇಕಾದ ವಿಚಾರಗಳನ್ನೂ ಈ ಸಮಯ ಕಲಿಸಿದೆ ಎಂದು ಅವರು ಅಭಿಪ್ರಾಯ ಪಟ್ಟರು. ದೇಶವು ಉತ್ತಮ ರೀತಿಯಲ್ಲಿ ಬೆಳೆಯ ಬೇಕಾದರೆ ಸರಕಾರದ ಜೊತೆಗೆ ಪ್ರಜೆಗಳ ಸಹಕಾರವೂ ಇರಬೇಕಾಗುತ್ತದೆ. ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಬೇಕಾಗಿ ಬಂದಾಗ ಅವುಗಳನ್ನು ಎದುರಿಸುವ ಯುಕ್ತಿಯೂ ಒಂದು ಕೌಶಲ್ಯ. ಸರಕಾರವನ್ನೇ ಆಗಲಿ, ಒಂದು ಸಂಸ್ಥೆ ಅಥವಾ ಒಂದು ಮನೆಯನ್ನು ಮುನ್ನಡೆಸಲು, ನಮ್ಮ ಜೀವನದಲ್ಲಿ ಉನ್ನತಿಯನ್ನು ಪಡೆಯಲು, ವ್ಯಕ್ತಿತ್ವ ವಿಕಸನಕ್ಕೆ ಈ ಕೌಶಲ್ಯದ ಅವಶ್ಯಕತೆಯಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪೆÇ್ರ. ವಿಷ್ಣು ಗಣಪತಿ ಭಟ್ ಮಾತನಾಡಿ, ಮಹಾಭಾರತದಲ್ಲಿ ಬರುವ ಕೃಷ್ಣನ ಮಾತುಗಳು ‘ನಿರ್ವಹಣಾ’ ಸಾಮಥ್ರ್ಯ ವೃದ್ಧಿಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತದೆ. ಇದು ಜೀವನ ನಿರ್ವಣೆ, ಉದ್ಯೋಗ ಬದುಕಿಗೂ ಅನ್ವಯಿಸಿಕೊಳ್ಳಬಹುದು. ವಿದ್ಯಾರ್ಥಿಗಳ ಜೀವನ ಹಾಗೂ ವೃತ್ತಿ ಬದುಕಿನ ಸನ್ನಿವೇಶಗಳನ್ನು ಎದುರಿಸಲು ಅಗತ್ಯವಿರುವ ಕೌಶಲ್ಯವನ್ನು ವೃದ್ಧಿಸುವ ದೃಷ್ಟಿಯಿಂದ ಈ ಕಾರ್ಯಾಗಾರ ಪ್ರಮುಖ್ಯತೆ ಪಡೆದುಕೊಳ್ಳುತ್ತದೆ ಎಂದು ನುಡಿದರು. ಈ ಸಂದರ್ಭ ವೇದಿಕೆಯಲ್ಲಿ ಕಾಲೇಜಿನ ಐಕ್ಯುಎಸಿ ಸಂಯೋಜಕ ಶಿವಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಚನ ಪ್ರಾರ್ಥಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಮೇಶ್ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್. ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಲಕ್ಷ್ಮಿ ವಿ.ಭಟ್, ವಿವೇಕಾನಂದ ಎಂ.ಬಿ.ಎ. ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಶೇಖರ್ ಅಯ್ಯರ್ ಹಾಗೂ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‍ನ ಸಂಸ್ಥಾಪಕ ಡಾ. ಶ್ರೀಶ ಭಟ್ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು