Monday, January 20, 2025
ಸುದ್ದಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ಅಭ್ಯಾಸ ವರ್ಗದ ಸಮಾರೋಪ ಸಮಾರಂಭ-ಕಹಳೆ ನ್ಯೂಸ್

ಮಂಗಳೂರು:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ಅಭ್ಯಾಸ ವರ್ಗದ ಸಮಾರೋಪ ಸಮಾರಂಭವು ಶಕ್ತಿನಗರದ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಸುಮನಸ ಸಭಾಭವನದಲ್ಲಿ ನೆರವೇರಿತು.ಸಮಾರೋಪ ಸಮಾರಂಭದ ಭಾಷಣವನ್ನು ಅ.ಭಾ.ವಿ.ಪ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ ಅವರು ಮಾಡಿ , ವಿದ್ಯಾರ್ಥಿ ಪರಿಷತ್ ನ ಬಗ್ಗೆ , ಕಾರ್ಯಗಳ ಬಗ್ಗೆ , ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಾರೋಪ ಸಮಾರಂಭದಲ್ಲಿ ವಿಭಾಗ ಪ್ರಮುಖರಾದ ಕೇಶವ ಬಂಗೇರರವರು ಮಂಗಳೂರು ಮಹಾನಗರದ ನೂತನ ಕಾರ್ಯಕಾರಿಣಿ ಘೋಷಿಸಿದರು.ಮಂಗಳೂರು ಮಹಾನಗರದ ಅಧ್ಯಕ್ಷರಾಗಿ ಶ್ರೀಮತಿ ಭಾರತಿ ಪ್ರಭು ಅವರು ಮರು ಆಯ್ಕೆಯಾದರು ಉಪಾಧ್ಯಕ್ಷರಾಗಿ ಉಪನ್ಯಾಸಕರಾದ ಚಂದ್ರಶೇಖರ್ , ಯತೀಶ್ , ಶ್ರೀನಿವಾಸ್ ಆಯ್ಕೆಯಾದರು.ಮಂಗಳೂರು ಮಹಾನಗರದ ಕಾರ್ಯದರ್ಶಿಯಾಗಿ ಎಸ್. ಡಿ.ಎಂ ಕಾನೂನು ಕಾಲೇಜಿನ ಶ್ರೇಯಸ್ ಶೆಟ್ಟಿ ಅವರು ಆಯ್ಕೆಯಾದರು. ಸಹ ಕಾರ್ಯದರ್ಶಿಗಳಾಗಿ ಶ್ರೇಯಸ್ , ಕಿರಣ್,ಸ್ವಸ್ತಿಕ್,ಆತ್ಮಿಕ ಆಯ್ಕೆಯಾದರು.ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಆಗಿ ಸುಶಾನ,ತಾಲೂಕು ಸಂಚಾಲಕರಾಗಿ ನಿಶಾನ್ ಆಳ್ವ,ನಗರ ವಿದ್ಯಾರ್ಥಿನಿ ಪ್ರಮುಖ್ ಶ್ರೀಲಕ್ಷ್ಮಿ, ಹಾಸ್ಟೆಲ್ ಪ್ರಮುಖ ಕೀರ್ತನ್ , ಸೇವಾ ಪ್ರಮುಖ್ ಸಂತೋಷ್, ಕಲಾಮಂಚ್ ಪ್ರಮುಖ್ ವಿನ್ಯಾಸ,ವೃತ್ತಿಪರ ಶಿಕ್ಷಣ ಪ್ರಮುಖ ಶ್ರೀಪಾದ್ ತಂತ್ರಿ,ಸಾಮಾಜಿಕ ಜಾಲತಾಣ ಪ್ರಮುಖ ಆದಿತ್ಯ, ಕಾರ್ಯಾಲಯ ಕಾರ್ಯದರ್ಶಿ ಆದಿತ್ಯ ಶೆಟ್ಟಿ, ಎಸ್.ಎಫ್.ಡಿ ಪ್ರಮುಖ್ ವರುಣ ಸಿಂಗಾಲ ಹೋರಾಟ ಪ್ರಮುಖ್ ಪ್ರಣಾಮ್ ಮತ್ತು ನೀಲೇಶ್ ಆಯ್ಕೆಯಾದರು.ನೂತನವಾಗಿ ಆಯ್ಕೆಯಾದ ನಗರ ಕಾರ್ಯದರ್ಶಿ ಅವರಿಗೆ ನಗರ ಕಾರ್ಯದರ್ಶಿಯಾಗಿದ್ದ ಮಣಿಕಂಠ ಕಳಸ ಇವರು ಎಬಿವಿಪಿಯ ಧ್ವಜವನ್ನು ನೀಡುವ ಮೂಲಕ ಜವಾಬ್ದಾರಿಯನ್ನು ಹಸ್ತಾಂತರಿಸಿದರು .ಅ.ಭಾ.ವಿ.ಪ ಹಿರಿಯರಾದ ಡಾ.ಚ.ನ ಶಂಕರರಾಯ ಉಪಸ್ಥಿತರಿದ್ದರು .

ಜಾಹೀರಾತು
ಜಾಹೀರಾತು
ಜಾಹೀರಾತು