Monday, January 20, 2025
ದಕ್ಷಿಣ ಕನ್ನಡಪುತ್ತೂರುಬಂಟ್ವಾಳ

ಪೆರುವಾಯಿ: ಬೈಕ್ ಅಪಘಾತಕ್ಕೀಡಾದ ವಿವೇಕಾನಂದ ಕಾಲೇಜು ಹಳೆ ವಿದ್ಯಾರ್ಥಿ ಶಿವಪ್ರಸಾದ್ ರವರ ಚಿಕಿತ್ಸೆಗಾಗಿ ಅರ್ಥಿಕ ನೆರವಿಗೆ ಮನವಿ-ಕಹಳೆ ನ್ಯೂಸ್

ಪುತ್ತೂರು: ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಕನ್ನರಡ್ಕ ನಿವಾಸಿ ಕೆ.ಆರ್. ಶಿವಪ್ರಸಾದ್ (22 ವರ್ಷ) ರವರಿಗೆ ಜ.5ರಂದು ಮಂಗಳೂರಿನ ಕೊಟ್ಟಾರ ಚೌಕಿ ಬಳಿ ಬೈಕ್ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡು ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇವರು ಪುತ್ತೂರು ವಿವೇಕಾನಂದ ಕಾಲೇಜಿನ ಹಳೆವಿದ್ಯಾರ್ಥಿಯಾಗಿದ್ದು ಎಬಿವಿಪಿಯಲ್ಲಿ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದರು.ಬೈಕ್ ಬಿದ್ದ ರಭಸಕ್ಕೆ ಅವರ ತಲೆಯ ಭಾಗಕ್ಕೆ ಬಲವಾದ ಏಟು ಬಿದ್ದಿದ್ದು, ದೇಹದ ಹಲವು ಭಾಗಗಳಲ್ಲಿ ತೀವ್ರವಾಗಿ ಗಾಯಗೊಂಡು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ವೈದ್ಯರು ಚಿಕಿತ್ಸೆಗಾಗಿ ಸುಮಾರು 8 ಲಕ್ಷ ರೂ. ಖರ್ಚು ತಗುಲುವ ಮಾಹಿತಿ ನೀಡಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ಮತ್ತು ಆಸ್ಪತ್ರೆಯ ವೆಚ್ಚವನ್ನು ಭರಿಸಲು ಅವರ ಕುಟುಂಬಕ್ಕೆ ಸಾಧ್ಯವಿಲ್ಲದ ಕಾರಣದಿಂದ ದಾನಿಗಳು ನಿಮ್ಮ ಕೈಯಲ್ಲಾದ ಸಂಭಾವ್ಯ ಮೊತ್ತದ ಧನ ಸಹಾಯವನ್ನು ಮಾಡುವಂತೆ ಹೆತ್ತವರು ಮನವಿ
ಮಾಡಿಕೊಂಡಿದ್ದಾರೆ.
ನೀವೂ ಹಣ ಕಳಿಸಬೇಕಾದ ಬ್ಯಾಂಕ್
ಖಾತೆ ಇಂತಿದೆ:

ಜಾಹೀರಾತು
ಜಾಹೀರಾತು
ಜಾಹೀರಾತು

ವಿಳಾಸ:
ಕೆರಾಜೇಂದ್ರ ನಾಯ್ಕ
ಕನ್ನರಡ್ಕ ಮನೆ, ಪೆರುವಾಯಿ ಗ್ರಾಮ, ಬಂಟ್ವಾಳ
ತಾಲೂಕು, ದಕ್ಷಿಣಕನ್ನಡ-574260
ಬ್ಯಾಂಕ್ ಖಾತೆ ಸಂಖ್ಯೆ ವಿವರ:
RAJENDRA NAIKK
State Bank of India
A/C No. :- 54058506382
*IFSC Code :- SBIN0004608