ಉಡುಪಿ ಜಿಲ್ಲೆಯ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತಾಡಿ ಭಾಗದಲ್ಲಿ ಗೋರಿಲ್ಲಾ ಪ್ರತ್ಯಕ್ಷ-ಕಹಳೆ ನ್ಯೂಸ್
ಉಡುಪಿ: ಉಡುಪಿ ಜಿಲ್ಲೆಯ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತಾಡಿ ಭಾಗದಲ್ಲಿ ಗೋರಿಲ್ಲಾ ಕಾಣಿಸಿಕೊಂಡಿದೆ. ಈಗಾಗಲೇ ಸಾಮಾನ್ಯವಾಗಿ ಎಲ್ಲಾ ಕಡೆ ಚಿರತೆ, ಕಾಡುಕೋಣ ಗೋಚರಿಸುತ್ತಿತ್ತು. ಆದರೆ ಇದೀಗ ಗೋರಿಲ್ಲಾ ಕಾಣಿಸಿಕೊಂಡಿದೆ.
ಈ ಗೋರಿಲ್ಲಾ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಅರಣ್ಯ ಇಲಾಖೆ ಅಧಿಕಾರಿ ಹರೀಶ್ ನೇತೃತ್ವದಲ್ಲಿ ಶೋಧ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೋರಿಲ್ಲಾ ಹೆಜ್ಜೆ ಗುರುತು ಕಾಣಿಸಿದ್ದು, ಸುಮಾರು ಎಂಟು ಎಕರೆ ವಿಸ್ತೀರ್ಣದ ಕಾಡು ಪ್ರದೇಶದಲ್ಲಿ ಶೋಧ ಕಾರ್ಯದಲ್ಲಿ ಪ್ರತ್ಯಕ್ಷದರ್ಶಿ ಗುರುರಾಜ್, ಪ್ರಜ್ವುಲ್ ಹಾಗೂ ಸ್ಥಳೀಯರ ಸಹಕಾರ ಪಡೆದು ಹುಡುಕಾಟ ನಡೆದರೂ ಎಲ್ಲಿಯೂ ಗೋರಿಲ್ಲಾ ಸುಳಿವು ಲಭ್ಯವಾಗಲಿಲ್ಲ. ಹಾಗೆಯೇ ಯಾರೂ ಕೂಡ ಮಕ್ಕಳನ್ನು ಹೊರಗೆ ಒಬ್ಬಂಟಿಯಾಗಿ ತಿರುಗಾಡಲು ಬಿಡಬೇಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.