Tuesday, January 21, 2025
ಪುತ್ತೂರು

ಪ್ರತಿ ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯ ಉಪಯೋಗವಾಗುತ್ತಿದೆ: ಡಾ ಹರಿವಿನೋದ್-ಕಹಳೆ ನ್ಯೂಸ್

ಪುತ್ತೂರು : ಮನುಷ್ಯ ತನ್ನ ಸ್ವಂತಿಕೆ ಹಾಗೂ ಆಲೋಚನೆಗಳನ್ನು ಆಧುನಿಕ ತಂತ್ರಜ್ಞಾನಗಳಿಗೆ ನೀಡಿದ್ದಾನೆ. ತನಗೆ ಅರಿವಿಲ್ಲದೆಯೇ ತಾನು ತಂತ್ರಜ್ಞಾನಕ್ಕೆ ಅವಲಂಬಿತನಾಗಿದ್ದಾನೆ. ಪ್ರತಿಯೊಂದು ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದಾನೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಹರಿವಿನೋದ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಪುತ್ತೂರಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐಕ್ಯುಎಸಿ ವತಿಯಿಂದ ಆಯೋಜಿಸಿದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಷಯದ ಕುರಿತು ಬುಧವಾರ ಮಾತನಾಡಿದರು. ಅವರು ಇವತ್ತಿನ ದಿನದಲ್ಲಿ ಕೃತಕ ಬುದ್ಧಿ ಮತ್ತೆ ತುಂಬಾ ಉಪಕಾರಿಯಾಗಿದೆ. ಜೊತೆಗೆ ಇದೊಂದು ಸವಾಲಿನ ವಿಷಯವಾಗಿದೆ. ಪ್ರತಿ ಹಂತದಲ್ಲೂ ತಂತ್ರಜ್ಞಾನದ ಬಳಕೆಯಾಗುತ್ತಿದೆ. ಜನರು ತಂತ್ರಜ್ಞಾನಗಳನ್ನೇ ಅತಿಯಾಗಿ ನಂಬಿದ್ದಾರೆ. ಆಧುನಿಕ ತಂತ್ರಜ್ಞಾನಗಳಲ್ಲಿ ಒಡಕುಗಳು ಇರುವುದರಿಂದ ಅದನ್ನು ತೀವ್ರ ಮಟ್ಟದಲ್ಲಿ ಅವಲಂಭಿತವಾಗಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಮಾತನಾಡಿ, ನಾವು ಹೊಸ ತಂತ್ರಜ್ಞಾನಗಳನ್ನು ಬಳಸಲು ಆರಂಭಿಸಿದಾಗ ನಮಗೆ ಕಷ್ಟವಾಗುತ್ತದೆ. ಕ್ರಮೇಣ ಅದರಲ್ಲಿ ನಾವು ಪರಿಣಿತರಾಗುವತ್ತ ಸಾಗುತ್ತೇವೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನುವುದು ಕಂಪ್ಯೂಟರ್ ಸೈನ್ಸ್ ಮೂಲವಾದರೂ ಪ್ರತಿಯೊಂದು ವಿಷಯದಲ್ಲಿ ಕೃತಕ ಬುದ್ಧಿಮತ್ತೆಯ ಉಲ್ಲೇಖವಿದೆ. ಆಧುನಿಕ ತಂತ್ರಜ್ಞಾನಗಳನ್ನು ಸುಲಭ ಹಾಗೂ ವೇಗವಾಗಿದೆ ಎಂದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಅಕ್ಷತಾ ಕೆ.ಸಿ. ಸ್ವಾಗತಿಸಿ, ವೀಣಾ ಶಾರದ ಅತಿಥಿಯನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಆಶಿತಾ, ದೀಪಾ ಪ್ರಸನ್ನ ಪ್ರಾರ್ಥಿಸಿದರು. ಅತಿಥಿ ಉಪನ್ಯಾಸ ಕಾರ್ಯಕ್ರಮದ ಸಹ ಸಂಚಾಲಕ ರವಿ ಪ್ರಸಾದ್ ವಂದಿಸಿ, ವಿದ್ಯಾರ್ಥಿನಿ ಮಹಿಮಾ ವಿ. ಕಾರ್ಯಕ್ರಮವನ್ನು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು