ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಗಂಡನೆ ಹೆಂಡತಿಯನ್ನು ಕೊಂದ ಘಟನೆ ನಿನ್ನೆ ರಾತ್ರಿ ನಡೆದಿದೆ. ಈ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿ ಬಾಗಿಲಿನ ಕುಟ್ಟಿಚ್ಛಾರು ಮನೆ ಎಂಬಲ್ಲಿ ನಡೆದಿದ್ದು, ಆರೋಪಿ ಜಾನ್ಸನ್ ಎಂದು ಗುರುತಿಸಲಾಗಿದೆ.
ಆರೋಪಿ ಜಾನ್ಸನ್ನು ಕೇರಳ ಮೂಲದ ಇರುಟ್ಟಿ ಎಂಬಲ್ಲಿಯ ತನ್ನ ಪತ್ನಿ ಸೌಮ್ಯಾ ಜಾನ್ಸನ್ನನ್ನು ಕೊಲೆ ಮಾಡಿದ್ದಾನೆ ಎಂದು ಆಕೆಯ ಸಹೋದರ ಸನೋಜ್ ಫ್ರಾನ್ಸಿಸ್ ಕುತ್ರೊಟ್ಟು ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 47 ವರ್ಷ ಪ್ರಾಯದ ಜಾನ್ಸನ್ನು ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದು, ಇತ ದಿನ ಕುಡಿದುಕೊಂಡು ಬಂದು ಮನೆಯಲ್ಲಿ ಜಗಳ ಕಾಯುತ್ತಿದ್ದ, ಅಲ್ಲದೆ ಆತ ಪತ್ನಿಯ ಮೇಲೆ ಸದಾ ಸಂಶಯ ಪಡುತ್ತಿದ್ದ. ಆದರೆ ನಿನ್ನೆ ರಾತ್ರಿ ಕೂಡ ಜಗಳವಾಗಿ ಅದು ವಿಕೋಪಕ್ಕೆ ತಿರುಗಿ, ಆತನ ಪತ್ನಿ ಸೌಮ್ಯಳಿಗೆ ಮರದ ತುಂಡಿನಿಂದ ಹುಬ್ಬಿನ ಜಾಗದಲ್ಲಿ ಹೊಡೆದಿದ್ದು ಅಲ್ಲದೆ, ತಲೆಯ ಹಿಂದಿನ ಭಾಗಕ್ಕೆ ಬಲವಾದ ಏಟು ಕೊಟ್ಟಿದ್ದ ಸೌಮ್ಯ ಜಾನ್ಸನ್ ಅವರನ್ನು ಮೊದಲು ಬೆಳ್ತಂಗಡಿಯಲ್ಲಿ ಆಸ್ವತ್ರೆಗೆ ತೋರಿಸಲಾಗಿತ್ತು. ಆದರೆ ಅಲ್ಲಿಂದ ಮಂಗಳೂರು ಆಸ್ವತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಸೂಚಿಸಲಾಯಿತು. ಆದರೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲಿ ಆಕೆ ಮೃತಪಟ್ಟಿದ್ದಾರೆ. ಈ ಘಟನೆಯು ನಿನ್ನೆ ಮಧ್ಯರಾತ್ರಿ ನಡೆದಿದ್ದು, ಸರ್ಕಲ್ ಇನ್ಸ್ಪಕ್ಟರ್ ಸಂದೇಶ ಬಿಜಿ ಮತ್ತು ಧರ್ಮಸ್ಥಳ ಎಸ್ಸೈ ಪವನ್ ಇವರ ತಂಡ ಘಟನೆ ನಡೆದ ಸ್ಥಳಕ್ಕೆ ಆ ಕೂಡಲೇ ಧಾವಿಸಿ, ಪೊಲೀಸ್ ತಂಡವೇ ಆಕೆಯನ್ನು ಆಸ್ವತ್ರೆಗೆ ದಾಖಲಿಸಿದ್ದರು. ಮೃತ ಸೌಮ್ಯ ಅವರು 10 ವರ್ಷ ಪ್ರಾಯದ ಮಗಳನ್ನು ಅಗಲಿದ್ದಾರೆ.