Recent Posts

Monday, January 20, 2025
ಸುದ್ದಿ

ಕೊಡಿಯಾಲ್`ಬೈಲ್ ವಾರ್ಡಿನಲ್ಲಿ 25 ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರಿಂದ ಗುದ್ದಲಿಪೂಜೆ- ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಕೊಡಿಯಾಲ್ ಬೈಲ್ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಮಾತನಾಡಿದ ಶಾಸಕ ಕಾಮತ್, ಕೊಡಿಯಾಲ್ ಬೈಲ್ ವಾರ್ಡಿನ ಗಣೇಶ್ ರಾವ್ ಲೇನ್ ರಸ್ತೆಯ ಅಭಿವೃದ್ಧಿ ಹಾಗೂ ಒಳಚರಂಡಿ ಕಾಮಗಾರಿಗೆ 25 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು ಗುದ್ದಲಿಪೂಜೆ ನೆರವೇರಿಸಿದ್ದೇವೆ. ಸ್ಥಳೀಯ ಕಾರ್ಪೋರೇಟರ್ ಸುಧೀರ್ ಶೆಟ್ಟಿ ಅವರು ಜನರ ಬೇಡಿಕೆಯನುಸಾರ ವಾರ್ಡಿನ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ದುಡಿಯುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕೊಡಿಯಾಲ್ ಬೈಲ್ ವಾರ್ಡ್ ಕಾರ್ಪೋರೇಟರ್ ಸುಧೀರ್ ಶೆಟ್ಟಿ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಪ್ರಶಾಂತ್ ಅಳ್ವ, ವಿವೇಕ್ ದೇವಾಡಿಗ, ಯಶವಂತ್ ಕುದ್ರೋಳಿ, ವಸಂತ್ ಜೆ ಪೂಜಾರಿ, ಚಂದ್ರಶೇಖರ್ ಶೆಟ್ಟಿ
ಶಶಿಧರ್, ಜಯರಾಜ್ ಶೆಟ್ಟಿ, ಮೇಘರಾಜ್ ಬಳ್ಳಾಲ್ ಬಾಗ್, ಸುರೇಶ್ ಬಲಿಪತೋಟ, ಗಂಗಾಧರ್ ಬಳ್ಳಾಲ್ ಬಾಗ್, ಸದಾಶಿವ ಬಿಜೈ, ಕಿರಣ್ ಕುಮಾರ್ ಕೊಡಿಯಲ್ ಬೈಲ್, ಹಿರಿಯರಾದ ಚಂದ್ರಶೇಖರ, ಮಾಧು ಗುರಿಕಾರ ಹಾಗೂ ಬಿಜೆಪಿ ಕಾರ್ಯಕರ್ತರು ಸ್ಥಳೀಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು