Recent Posts

Sunday, November 10, 2024
ಸುದ್ದಿ

ಪೋಸ್ಟ್ ಕಾರ್ಡ್ ಸ್ಥಾಪಕ ಮಹೇಶ್ ಹೆಗಡೆ ಬಂಧನದ ಹಿಂದಿದೆ ಸಿದ್ದರಾಮಯ್ಯಾ ಸರಕಾರದ ಬಹುದೊಡ್ಡ ಪಿತೂರಿ ; ಬಂಧನ ಖಂಡಿಸಿ ಕಾಂಗ್ರೇಸ್ ವಿರುದ್ದ ಸಿಡಿದೆದ್ದ ಸಂಸದರು

ರಾಷ್ಟ್ರಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ, ಪೋಸ್ಟ್ ಕಾರ್ಡ್ ಸಂಸ್ಥೆಯ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗಡೆಯವರನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ. ರಾಷ್ಟ್ರಾದ್ಯಂತ ಈ ಸುದ್ದಿ ಸಂಚಲನ ಸೃಷ್ಟಿಸಿದ್ದು, ಸರ್ಕಾರದ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಿದು ಎಂದು ಹಲವರು ಕಿಡಿಕಾರಿದ್ದಾರೆ. ರಾಷ್ಟ್ರೀಯವಾದಿ ಬರಹಗಾರರು, ಹಿಂದುತ್ವ ಪರ ಹೋರಾಟಗಾರರು, ಬಲಪಂಥೀಯ ಚಿಂತಕರು, ಬಿಜೆಪಿ ನಾಯಕರು ಈ ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವಿದೆ ಎಂದು ಹಲವರು ಕಿಡಿಕಾರಿದ್ದಾರೆ. ಸದ್ಯ ಮಹೇಶ್ ವಿಕ್ರಂ ಹೆಗಡೆ ಪೋಲೀಸರ ವಶದಲ್ಲಿದ್ದು, ಜಾಮೀನು ಪಡೆಯಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಚುನಾವಣೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಸರ್ಕಾರ ಬಲಪಂಥೀಯರನ್ನ ಹತ್ತಿಕ್ಕಲು ಯತ್ನಿಸುತ್ತಿದೆ ಎಂಬ ಆಪಾದನೆ ಕೇಳಿ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹೇಶ್ ಹೆಗಡೆ ಬಂಧಿಸಲು ಕಾಂಗ್ರೇಸ್ ಯಾಕೆ ಮುಂದಾಯಿತು ?
ಮಹೇಶ್ ಹೆಗಡೆ ಬಂಧನದ ಹಿಂದಿದೆ ಸಿದ್ದರಾಮಯ್ಯಾ ಸರಕಾರದ ಬಹುದೊಡ್ಡ ಪಿತೂರಿ :

ಹೌದು,ಸಮಾಜ ಹಿತದ ಪ್ರಶ್ನೆ ಬಂದಾಗ, ಧರ್ಮದ ವಿಷಯ ಬಂದಾಗ, ನಂಬಿ ನಡೆದ ಸಿದ್ಧಾಂತಗಳ ವಿಷಯ ಬಂದಾಗ ಇವರು ರಾಜಿಯಾದ್ದದೇ ಇಲ್ಲ. ಎಷ್ಟೋ ಬೆದರಿಕೆಗಳು ಬಂದಾಗಲೂ ಇವರು ಮೂಲೆ ಸೇರಿಲ್ಲ. ವಿರೋಧಿಗಳು ಎಷ್ಟೇ ಪ್ರಬಲರಾದರೂ ಅವರಿಗೆ ಮಣಿದಿಲ್ಲ. ವ್ಯವಸ್ಥಿತ ಜಾಲ ಹೆಣೆದರೂ ಇವರ ಜನಪ್ರಿಯತೆಯ ಗುಟ್ಟು ಬೇರೆಯವರಿಗೆ ಅರ್ಥಮಾಡಿಕೊಳ್ಳಲಾಗಿಲ್ಲ. ಬಹುತೇಕರು ಇವರ ಹೆಸರು ಕೇಳಿದ್ದರೂ ಇವರಾರೆಂಬುದು ತಿಳಿದಿಲ್ಲ. ಒಂದು ಊರಲ್ಲ, ಜಿಲ್ಲೆಯಲ್ಲ , ರಾಜ್ಯವಲ್ಲ, ಇಡೀ ದೇಶವೂ ಅಲ್ಲ, ವಿದೇಶಗಳಲ್ಲೂ ಇವರು ಹೆಸರಾದವರು. ಅದೆಷ್ಟೋ ವರುಷಗಳಿಂದಲೂ ಸಿದ್ಧಾಂತಕ್ಕೆ ತಲೆ ಬಾಗಿ ನಡೆಯುತ್ತಿರುವ ವ್ಯಕ್ತಿ ಮಹೇಶ್ ವಿಕ್ರಮ್ ಹೆಗ್ಡೆ.

ಇವರು ಜಿಹಾದಿಗಳಿಂದ ಕೊಲೆಯಾದ ಮೂಡಬಿದಿರೆಯ ಪ್ರಶಾಂತ್ ಪೂಜಾರಿ, ಕಾಟಿಪಳ್ಳದ ದೀಪಕ್ ರಾವ್ ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿ ಧನಸಹಾಯ ಹರಿದು ಬರಲು ಕಾರಣಿಕರ್ತರಾಗಿದ್ದರು. ಸಿದ್ದರಾಮಯ್ಯ ಸರಕಾರ ಕಲ್ಲಡ್ಕ ಕನ್ನಡ ಶಾಲೆಗಳ ಅನ್ನವನ್ನು ಕಿತ್ತುಕೊಂಡಾಗ ಅಭಿಯಾನ ಆರಂಭಿಸಿ, ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿ ಮಕ್ಕಳಿಗೆ ಸಹಾಯ ಮಾಡಿ ಸಿದ್ದರಾಮಯ್ಯ ಸರಕಾರಕ್ಕೆ ಸೆಡ್ಡು ಹೊಡೆದಿದ್ದರು. ಪೋಸ್ಟ್ ಕಾರ್ಡ್ ಎನ್ನುವ ತಂಡವನ್ನು ಕಟ್ಟಿಕೊಂಡು, ನಕಲಿ ಜಾತ್ಯಾತೀತರು, ನಕಲಿ ಬುದ್ಧಿಜೀವಿಗಳ ಬಂಡವಾಳವನ್ನು ಬಯಲು ಮಾಡುತ್ತಿದ್ದರು ಮಹೇಶ್ ವಿಕ್ರಂ ಹೆಗಡೆ. ಇದೇ ಕಾರಣಕ್ಕಾಗಿಯೇ ಇಂದು ಈ ಪುಣ್ಯಾತ್ಮನನ್ನು ಕಂಬಿಗಳ ಹಿಂದೆ ನಿಲ್ಲುವಂತೆ ಕಾಂಗ್ರೇಸ್ ಮಾಢಿದೆ.

ಅಷ್ಟಕ್ಕೂ ನಡೆದಿದ್ದೇನು..?

ಪೋಸ್ಟ್ ಕಾರ್ಡ್ ಎನ್ನುವ ತಂಡವನ್ನು ಸಂಸ್ಥಾಪಿಸಿರುವ ಮಹೇಶ್ ವಿಕ್ರಂ ಹೆಗ್ಡೆ, ಇತ್ತೀಚೆಗೆ ಜೈನ ಮುನಿ ಯೋರ್ವರ ಕುರಿತು ದೇಶಾದ್ಯಂತ ವೈರಲ್ ಆಗಿದ್ದ ಸುದ್ದಿಯೊಂದನ್ನು ಟ್ವೀಟ್ ಮಾಡಿದ್ದರು. ಆ ಸುದ್ದಿಯ ಕುರಿತಾಗಿ ಓರ್ವರು ಮಹೇಶ್ ವಿಕ್ರಂ ಹೆಗಡೆಯವರ ಮೇಲೆ ಗಫರ್ ಬೇಗ್ ಎನ್ನುವವರು ಕೇಸ್ ದಾಖಲಿಸಿದ್ದರು. ಅದನ್ನೇ ನೆಪವಾಗಿರಿಸಿಕೊಂಡು ಪೊಲೀಸರು ರಾತ್ರೋರಾತ್ರಿ ಮಹೇಶ್ ವಿಕ್ರಂ ಹೆಗ್ಡೆ ತಂಗಿದ್ದ ಹೋಟೆಲ್ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ ಎನ್ನಲಾಗಿದೆ.

ಎರಡು ಧರ್ಮಗಳ ನಡುವೆ ಕೋಮು ದ್ವೇಷವನ್ನು ಹರಡಿ, ಸರ್ಕಾರದ ವಿರುದ್ಧ ಅಪಪ್ರಚಾರವನ್ನು ಮಹೇಶ್ ಮಾಡಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ. ಆದರೆ ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದ್ದು, ಹಲವಾರು ದಿನಗಳಿಂದ ಮಹೇಶ್ ರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಈಗ ಈ ಚಿಕ್ಕ ಕಾರಣವೊಂದನ್ನು ಇಟ್ಟುಕೊಂಡು ಮಹೇಶ್ ವಿಕ್ರಂ ಹೆಗ್ಡೆಯವರನ್ನು ಬಂಧಿಸಲಾಗಿದೆ.

ಮಹೇಶ್ ಹೆಗಡೆ ಪರ ಟ್ವೀಟ್‍ಗಳ ಮಹಾಪೂರ ! ಕಾಂಗ್ರೇಸ್ ವಿರುದ್ದ ಸಿಡಿದೆದ್ದ ಸಂಸದರು :

ರಾಷ್ಟ್ರಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ, ಪೋಸ್ಟ್ ಕಾರ್ಡ್ ಸಂಸ್ಥೆಯ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗಡೆಯವರನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿದ್ದಾರೆ. ರಾಷ್ಟ್ರಾದ್ಯಂತ ಈ ಸುದ್ದಿ ಸಂಚಲನ ಸೃಷ್ಟಿಸಿದ್ದು, ಸರ್ಕಾರದ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಿದು ಎಂದು ಹಲವರು ಕಿಡಿಕಾರಿದ್ದಾರೆ. ರಾಷ್ಟ್ರೀಯವಾದಿ ಬರಹಗಾರರು, ಹಿಂದುತ್ವ ಪರ ಹೋರಾಟಗಾರರು, ಬಲಪಂಥೀಯ ಚಿಂತಕರು, ಬಿಜೆಪಿ ನಾಯಕರು ಈ ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹೇಶ್ ವಿಕ್ರಂ ಹೆಗ್ಡೆ ಪರವಾಗಿ 55 ಸಾವಿರ ಟ್ವೀಟ್ ಗಳು!

ಪ್ರಖ್ಯಾತ ಸಾಮಾಜಿಕ ಜಾಲ ತಾಣವಾದ ಟ್ವಿಟ್ಟರ್ ನಲ್ಲಿ ಮಹೇಶ್ ವಿಕ್ರಂ ಹೆಗ್ಡೆ ಬಂಧನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದುವರೆಗೂ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಟ್ವೀಟ್ ಗಳು ಮಹೇಶ್ ಪರವಾಗಿ ಬಂದಿದೆ. #ReleaseMaheshHegde ಎನ್ನುವ ಹ್ಯಾಷ್ಟ್ಯಾಗ್ ಬಳಸಿ 45 ಸಾವಿರ ಮಂದಿ ಟ್ವೀಟ್ ಮಾಡಿದ್ದಾರೆ. ನೆನ್ನೆ ಕೇವಲ ಎರಡೇ ಗಂಟೆಯಲ್ಲಿ ಇದು ರಾಷ್ಟ್ರದ ನಂಬರ್ ಒನ್ ಟ್ವಿಟ್ಟರ್ ಟ್ರೆಂಡ್ ಆಗಿತ್ತು. ಇನ್ನು #ISupportMaheshHegde ಎನ್ನುವ ಹ್ಯಾಸ್ಟ್ಯಾಗ್ ಬಳಸಿ ಹತ್ತು ಸಾವಿರಕ್ಕೂ ಅಧಿಕ ಜನರು ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಬೆಂಬಲಿಗರನ್ನು ಹೊಂದಿದ್ದಂತಹ ರಾಷ್ಟ್ರೀಯವಾದಿ ಚಿಂತಕ ನೋರ್ವನನ್ನು ಬಂಧಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

 

ಕೇವಲ ಸಾಮಾನ್ಯ ಜನರಷ್ಟೇ ಅಲ್ಲ, ಸಂಸದರು ಬಿಜೆಪಿಯ ಹಲವು ನಾಯಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಟ್ವೀಟ್ :

ಮಹೇಶ್ ರವರ ಬಂಧನದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸರ್ಕಾರವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸಿದ್ದರಾಮಯ್ಯನವರ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ಧಾಂತಗಳ ಜೊತೆ ಹೋರಾಡಲಾಗದ ಹೇಡಿ ಸರ್ಕಾರ ಮಹೇಶ್ ವಿಕ್ರಮ್ ಹೆಗಡೆಯವರನ್ನು ಬಂಧಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸಂಸದ ಪ್ರತಾಪ್ ಸಿಂಹ ಟ್ವೀಟ್ :

 ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೂಡ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಹೇಡಿ ಸರ್ಕಾರ ಮಹೇಶ್ ವಿಕ್ರಂ ಹೆಗಡೆಯವರನ್ನು ಬಂಧಿಸಿದೆ, ಅದೂ ಕೂಡ ಸಂಬಂಧವಿಲ್ಲದ ಐಟಿ-66 ಕಾಯ್ದೆಯಡಿಯಲ್ಲಿ. ಸಿಸಿಬಿ ಪೋಲೀಸರನ್ನು ಬಳಸಿಕೊಂಡು ಬಂಧಿಸಿರುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಯುವ ಮೋರ್ಚಾದಿಂದ ವಕೀಲರ ತಂಡವನ್ನು ಸಿಸಿಬಿ ಪೊಲೀಸರ ಬಳಿ ಕಳುಹಿಸಿದಾಗ ಪೊಲೀಸರು ಸುಳ್ಳು ಹೇಳಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
https://twitter.com/mepratap/status/979327436507639809
 ಭಾರತೀಯ ಜನತಾ ಪಕ್ಷದ ನಾಯಕ ಅರವಿಂದ ಲಿಂಬಾವಳಿ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವಿದೆ ಎಂದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಕೊಡದ ಹೇಡಿ ಸರ್ಕಾರ ಸಾಮಾಜಿಕ ಜಾಲತಾಣದ ಕಾರ್ಯಕರ್ತ ಮಹೇಶ್ ವಿಕ್ರಂ ಹೆಗಡೆಯವರನ್ನು ಬಂಧಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.