Sunday, January 19, 2025
ಮೈಸೂರು

ಪ್ರೇಮಕುಮಾರಿಗೆ ವಂಚನೆ ಪ್ರಕರಣದಲ್ಲಿ ಶಾಸಕ ರಾಮದಾಸ್‍ಗೆ ನಿರೀಕ್ಷಣಾ ಜಾಮೀನು-ಕಹಳೆ ನ್ಯೂಸ್

ಮೈಸೂರು: ಮೈಸೂರು ಶಾಸಕ ರಾಮದಾಸ್ ಅವರು ಪ್ರೇಮಾಕುಮಾರಿಗೆ ವಂಚನೆ ನಡೆಸಿ, ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಜಿಲ್ಲಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಮದಾಸ್ ಹಾಗೂ ಪ್ರೇಮಕುಮಾರಿ ಅವರ ರಾಜ್ಯದಾದ್ಯಂತ ಬಾರೀ ಸುದ್ದಿಯಾಗಿದ್ದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರೇಮಾಕುಮಾರಿ ಪ್ರಕರಣದಲ್ಲಿ ರಾಮದಾಸ್ ಅವರ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ಮೈಸೂರಿನ ರಸ್ವತಿಪುರಂ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಪೊಲೀಸರು ಸಲ್ಲಿಸಿದ್ದ ವರದಿಯನ್ನು ತಿರಸ್ಕರಿಸಿದ ನ್ಯಾಯಾಲಯ ಶಾಸಕರಿಗೆ ಸಮನ್ಸ್ ಜಾರಿ ಮಾಡಿತ್ತು. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಶಾಸಕ ರಾಮದಾಸ್ ಹೈಕೋರ್ಟ್ ಮೊರೆ ಹೊಕ್ಕಿದ್ದಾಗ ಹೈಕೋರ್ಟ್ ಶಾಸಕರ ಅರ್ಜಿ ವಜಾ ಮಾಡಿತ್ತು. ಇದಾದ ನಂತರ ರಾಮದಾಸ್ ಅವರು ಜಮೀನಿಗಾಗಿ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಾದ ವಿವಾದಗಳನ್ನು ಆಲಿಸಿದ ಜಿಲ್ಲಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ ಎಸ್.ಎ.ರಾಮದಾಸ್ ಅವರಿಗೆ 50 ಸಾವಿರದ ಬಾಂಡ್ ನೀಡುವಂತೆ ಹೇಳಿ ಜಾಮೀನು ಮಂಜೂರು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು