Thursday, January 23, 2025
ಹೆಚ್ಚಿನ ಸುದ್ದಿ

ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಶ್ರೀ ಶೂಲಿನೀದುರ್ಗಾ ಮತ್ತು ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯದ ಭೂಪರಿಗ್ರಹ ಕಾರ್ಯಕ್ರಮ-ಕಹಳೆ ನ್ಯೂಸ್

ಗುತ್ತಿಗಾರು: ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಶ್ರೀ ಶೂಲಿನೀದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಭೂಪರಿಗ್ರಹ ಕಾರ್ಯಕ್ರಮ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಭಾನುವಾರ ಮೊಗ್ರದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೊಗ್ರದಲ್ಲಿ ನೂತನವಾಗಿ ಶೂಲಿನೀದುರ್ಗಾ ಹಾಗೂ ಶ್ರೀ ವನದುರ್ಗಾ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಭೂ ಸಮತಟ್ಟು ಕಾರ್ಯ ನಡೆದು ಶನಿವಾರ ಸುದರ್ಶನ ಹವನ ಸಹಿತ ವಿವಿಧ ಧಾರ್ಮಿಕ ಕಾಯಕ್ರಮ ನಡೆದು ಭಾನುವಾರ ಭೂಪರಿಗ್ರಹ ಕಾರ್ಯಕ್ರಮ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಭೂಮಿ ಹದ ಮಾಡಿ ನವಧಾನ್ಯಗಳ ಬಿತ್ತನೆ ಕಾರ್ಯ ನಡೆಯಿತು. ಕುಂಟಾರು ರವೀಶ ತಂತ್ರಿಗಳು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭ ಪ್ರಮುಖರಾದ ಕಾರ್ಯಪ್ಪ ಗೌಡ ಚಿಕ್ಮುಳಿ, ಸತ್ಯನಾರಾಯಣ ಮೊಗ್ರ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಚಿಕ್ಮುಳಿ, ಕಾರ್ಯಾಧ್ಯಕ್ಷ ಉಮೇಶ್ ಮಕ್ಕಿ, ಗೌರವಾಧ್ಯಕ್ಷ ಪಿ ಎಸ್ ಗಂಗಾಧರ ಭಟ್ ಪುಚ್ಚಪ್ಪಾಡಿ, ಎಂ ಎನ್ ವೆಂಕಟ್ರಮಣ ಭಟ್ ಮೊಗ್ರ, ಮಹೇಶ್ ಪುಚ್ಚಪ್ಪಾಡಿ, ದೊಡ್ಡಣ್ಣ ಗೌಡ ಚಿಕ್ಮುಳಿ, ಆನಂದ ಗೌಡ ಮಲ್ಕಜೆ,ಚನ್ನಕೇಶವ ಕಮಿಲ, ಧನಂಜಯ ಮೊಗ್ರ, ಜೀವನ್ ಮಲ್ಕಜೆ, ಕುಮಾರಸ್ವಾಮಿ ಕಿನ್ನಿಕುಮೇರಿ, ವಿನಯಚಂದ್ರ ನೆಕ್ಲಾಜೆ,ನಿತ್ಯಾನಂದ ಕಾಂತಿಲ ಮೊದಲಾದವರು ಉಪಸ್ಥಿತರಿದ್ದರು.