Thursday, January 23, 2025
ಹೆಚ್ಚಿನ ಸುದ್ದಿ

ವಿಟ್ಲದಲ್ಲಿ 4 ವರ್ಷದ ಮಗು ಕಾಲು ಜಾರಿ ಕೆರೆಗೆ ಬಿದ್ದು ಸಾವು-ಕಹಳೆ ನ್ಯೂಸ್

ವಿಟ್ಲ: ಕೊಳ್ನಾಡು ಗ್ರಾಮದ ಸೆರ್ಕಳ ಎಂಬಲ್ಲಿ ತೋಟದಲ್ಲಿ ಇತರೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ತೋಟದ ಮಧ್ಯದಲ್ಲಿರುವ ಕೆರೆಗೆ ಬಿದ್ದು ನಾಲ್ಕು ವರ್ಷದ ಹೆಣ್ಣು ಮಗುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಬಾಲಕಿಯನ್ನು ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಹಂಝ ಎ ಅವರ ಪುತ್ರಿ ಸರಪುನ್ನಿಸಾ ಎಂದು ಗುರುತಿಸಲಾಗಿದೆ. ಈಕೆ ಇಬ್ಬರು ಮಕ್ಕಳ ಜೊತೆ ಅಬ್ಬಾಸ್ ಬಾಕಿಮಾರು ಎಂಬವರ ತೋಟಕ್ಕೆ ಆಟ ಆಡಲು ಹೋಗಿದ್ದಾಳೆ. ಈ ವೇಳೆಯಲ್ಲಿ ಸರಪುನ್ನಿಸಾ ತೋಟದ ಮಧ್ಯದಲ್ಲಿದ್ದ ಕೆರೆಗೆ ಜಾರಿ ಬಿದ್ದಿದ್ದಾಳೆ. ಈ ಸಂದರ್ಭದಲ್ಲಿ ರಶೀದ್ ಮತ್ತು ಬದ್ರುದ್ದೀನ್ ಅವರು ಓಡಿಕೊಂಡು ಬಂದು ಮನೆಯಲ್ಲಿ ವಿಷಯ ತಿಳಿಸಿದ್ದಾರೆ. ತೋಟದ ಮಧ್ಯದಲ್ಲಿದ್ದ ಕೆರೆಯ ಬಳಿಗೆ ಮನೆಮಂದಿ ಹೋದಾಗ ಮಗು ನೀರಿನಲ್ಲಿ ಮುಳುಗಿರುವುದನ್ನು ಕಂಡು ಆಕೆಯನ್ನು ನೀರಿನಿಂದ ಹೊರಗೆ ತೆಗೆದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್‍ನಲ್ಲಿ ಕರೆದುಕೊಂಡು ಹೋಗಿದ್ದಾರೆ. ವೈದ್ಯಾಧಿಕಾರಿಗಳು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು