Saturday, November 23, 2024
ಬೆಂಗಳೂರು

ದಲಿತರ ಉದ್ಧಾರಕ್ಕಾಗಿ ಮೀಸಲಿಟ್ಟ ಹಣ, ಇತರ ಯೋಜನೆಗೆ ಬಳಕೆ; ನ್ಯಾಯಮೂರ್ತಿ ನಾಗಮೋಹನದಾಸ್ ಅಕ್ರೋಶ-ಕಹಳೆ ನ್ಯೂಸ್

ಬೆಂಗಳೂರು : ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ದಲಿತರ ಉದ್ಧಾರಕ್ಕಾಗಿ ಮೀಸಲಾಗಿರುವ 28 ಸಾವಿರ ಕೋಟಿ ರೂ. 38 ಇಲಾಖೆಯಲ್ಲಿ ಹರಿದು ಹಂಚಿ ಹೋಗುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ದಲಿತರು ಅಭಿವೃದ್ಧಿ ಪಥದೆಡೆಗೆ ಸಾಗಬೇಕಾದರೆ ಅವರಿಗೆ ಸಿಗಬೇಕಾದ ಸೌಲಭ್ಯಗಳು ಒಂದೇ ಸೂರಿನಡಿ ಏಕಗವಾಕ್ಷಿ ಪದ್ಧತಿಯಂತೆ ಜಾರಿಗೋಳಿಸಿದರೆ ಮಾತ್ರ ಸಾಧ್ಯ ಎಂದು ಅವರು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ದಲಿತ ಹಕ್ಕುಗಳ ಸಮಿತಿ’ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ದಲಿತರು ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಲು ಇದೊಂದೇ ಸಮರ್ಪಕವಾದ ಮಾರ್ಗ ಹೇಳಿದ್ದು, ಸರ್ಕಾರಗಳು ಮನಸ್ಸಿಗೆ ಬಂದಂತೆ ಕಾರ್ಯ ಯೋಜನೆಗಳನ್ನು ರೂಪಿಸಿ 38 ಇಲಾಖೆಯಲ್ಲಿ ದಲಿತರು ಅಲೆದಾಡುವಂತೆ ಮಾಡುತ್ತಿದೆ ಎಂದು ತಿಳಿಸಿದರು. ಹಾಗೆ ದಲಿತ ಸಮುದಾಯಕ್ಕೆ ರಾಜ್ಯ ಸರಕಾರದ 2020-21ನೆ ಸಾಲಿನ ಬಜೆಟ್‍ನ ಶೇಕಡ 24.5 ರಷ್ಟು ಅನುದಾನವನ್ನು ಮೀಸಲಿಡಲಾಗಿತ್ತು. ಅಂದರೆ, ಒಟ್ಟು 27 ಸಾವಿರದ 500 ಕೋಟಿ ರೂ. ಇದರಿಂದ ಕೆಲ ದಿನಗಳ ಬಳಿಕ 1 ಸಾವಿರ ರೂ. ತಗ್ಗಿಸಲಾಯಿತು. ಆ ನಂತರ, ಇಲ್ಲಿಯವರೆಗೂ ಖರ್ಚು ಮಾಡಿದ್ದು, 8.5 ಸಾವಿರ ಕೋಟಿ ರೂ.ಮಾತ್ರ. ಅದರೆ ಇನ್ನುಳಿದ ಹಣವನ್ನು ನಮ್ಮ ಮೆಟ್ರೋ, ರಸ್ತೆ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದ್ದು, ಇನ್ನು, ಅಲ್ಪಸ್ವಲ್ಪ ಹಣವೂ ಶೋಷಿತ ಸಮುದಾಯಕ್ಕೆ ದಕ್ಕುತ್ತಿಲ್ಲ ಎಂದು ದಾಸ್ ಬೇಸರ ವ್ಯಕ್ತಪಡಿಸಿದರು. ದಲಿತರ ಅಭಿವೃದ್ಧಿಗಾಗಿ ಭೂ ಒಡೆತನ ಯೋಜನೆ, ಕೊಳವೆ ಬಾವಿ ಯೋಜನೆ, ಉದ್ಯೋಗ ಮತ್ತು ಎಸ್.ಸಿ. ಎಸ್.ಟಿ./ ಟಿ.ಎಸ್.ಪಿ. ಸಮರ್ಪಕವಾಗಿ ಜಾರಿಗೊಳಿಸಲು ದುಂಡು ಮೇಜಿನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಈ ದುಂಡು ಮೇಜಿನ ಸಭೆಯಲ್ಲಿ ಎಸ್.ಸಿ. ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಕೆ. ಶಿವಶಂಕರ, ಅಲೆಮಾರಿ ಜನಾಂಗದ ಮುಖಂಡ ಚಂದ್ರಶೇಖರ, ಬಿ.ಎಸ್.ಎಂ.ಎಂ.ನ ಕೇಂದ್ರ ಸಮಿತಿ ಸದಸ್ಯ ನಾಗರಾಜ ನಂಜುಂಡಯ್ಯ, ರಾಜ್ಯ ಮುಖಂಡ ಬಿ.ರಾಜಶೇಖರ ಮೂರ್ತಿ ಅತಿಥಿಗಳಾಗಿ ಭಾಗವಹಿಸಿದ್ದು, ಡಿ.ಹೆಚ್.ಎಸ್. ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಹಾಗೂ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.