Tuesday, January 21, 2025
ಪುತ್ತೂರು

ಸಾಮಾಜಿಕ ಜಾಲತಾಣ ಒಂದು ಮಯೆ, ಜನರು ಕೇವಲ ಕೈಗೊಂಬೆಗಳಷ್ಟೇ : ಅರವಿಂದ್ ಕುಡ್ಲ – ಕಹಳೆ ನ್ಯೂಸ್

ಪುತ್ತೂರು: ಕೊರೋನಾ ಕಾರಣದಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳು ಅನ್‍ಲೈನ್ ಶಿಕ್ಷಣದೆಡೆಗೆ ದಾಪುಗಾಲನ್ನೇ ನೆಟ್ಟಿದೆ. ಅನ್‍ಲೈನ್ ಶಿಕ್ಷಣ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗವು ಇದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡಂಬೈಲು ಇಲ್ಲಿನ ಮುಖ್ಯ ಶಿಕ್ಷಕ ಅರವಿಂದ್ ಕುಡ್ಲ ಹೇಳಿದರು.ಅವರು ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಸಂಯೋಜನೆಯ ಆಶ್ರಯದಲ್ಲಿ ನಡೆದ ಆನ್‍ಲೈನ್ ಶಿಕ್ಷಣ ಮತ್ತು ಸಮಯ ನಿರ್ವಹಣೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿ ಆನ್ ಲೈನ್ ನಿಂದ ಕಲಿಯುವ ಸಾಧ್ಯತೆಗಳು ಹೆಚ್ಚು, ಆದರೆ ದುರುಪಯೋಗಕ್ಕೆ ಬಳಸಿಕೊಂಡರೆ ಮಾತ್ರ ಜೀವನ ಹಾಳಗುತ್ತದೆ ಎಂದು ಹೇಳಿದರು.ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಶ್ರೀನಾಥ್ ಸ್ವಾಗತಿಸಿ, ಸ್ವಯಂಸೇವಕಿ ಚರಿಷ್ಮಾ ವಂದಿಸಿ, ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು