Sunday, January 19, 2025
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳ

ಮೆಲ್ಕಾರಿನ ಅಕ್ರಮ ಕಲ್ಲಿನ ಕೋರೆಗೆ ತಹಶೀಲ್ದಾರ್ ದಾಳಿ; 2ಜೆಸಿಬಿ ಹಾಗೂ ಟಿಪ್ಪರ್ ವಶಕ್ಕೆ-ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಮೆಲ್ಕಾರ್ ಬಳಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಲ್ಲಿನ ಕೋರೆಗೆ ಬಂಟ್ವಾಳ ತಹಸೀಲ್ದಾರ್ ರಶ್ಮಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೋರೆಯಲ್ಲಿ ಕೆಲಸದಲ್ಲಿ ನಿರತವಾಗಿದ್ದ ಎರಡು ಜೆಸಿಬಿ ಮತ್ತು ಟಿಪ್ಪರ್ ಲಾರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಳೆದ ಒಂದು ವರ್ಷದಿಂದ ಮೆಲ್ಕಾರ್ ಪೇಟೆಯ ಬಳಿಯಲ್ಲೇ ಕೋರೆ ಕಾರ್ಯಾಚರಣೆ ನಡೆಸುತ್ತಿತ್ತು. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬಂಟ್ವಾಳ ನಗರಸಭೆ ಸೇರಿ ವಿವಿಧ ಇಲಾಖೆಗಳಿಗೆ ಸ್ಥಳೀಯರು ದೂರು ನೀಡಿದ್ದರೂ, ಪ್ರಯೋಜನ ಆಗಿರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಆಧುನಿಕ ಹ್ಯೂಮನ್ ರೈಟ್ಸ್ ಸಂಘಟನೆಯವರು ಬಂಟ್ವಾಳ ತಹಸೀಲ್ದಾರ್ ಗೆ ದೂರು ನೀಡಿದ್ದಲ್ಲದೆ, ದ.ಕ. ಜಿಲ್ಲಾಧಿಕಾರಿಯ ಗಮನಕ್ಕೆ ತಂದಿದ್ದಾರೆ. ಜಿಲ್ಲಾಧಿಕಾರಿಯ ಸೂಚನೆಯಂತೆ ತಹಸೀಲ್ದಾರ್ ದಾಳಿ ನಡೆಸಿದ್ದು, ಯಂತ್ರಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ, ಕೋರೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರ ಕುರಿತಂತೆ ಈ ಹಿಂದೆಯೇ ಸ್ಥಳೀಯರಾದ ಖಲೀಲ್ ನಂದಾವರ ಇವರು ದೂರು ನೀಡಿದ್ದರು.