Sunday, January 19, 2025
ಸುದ್ದಿ

ಕೊರಗಜ್ಜನ ನಿಂದನೆ ಉರಿದುಬಿದ್ದ ಹಿಂದೂ ಸಂರಕ್ಷಣಾ ಸಮಿತಿ.

ಮಂಗಳೂರು : ಹಿಂದೂ ಸಮಾಜವನ್ನು ಗುರಿಯಾಗಿಸಿ ಕೆಲವು ಅತೀ ಬುದ್ದಿ ಜೀವಿಗಳು ಸಾಮಾಜಿಕ ಜಾಲತಾಣದಲ್ಲಿ ಹಲವು ಸಮಯಗಳಿಂದ ಅಪಪ್ರಚಾರ ಮಾಡುತ್ತಾ

ಹಿಂದೂ ದೇವರುಗಳನ್ನು ಅವಾಚ್ಯ ಶಭ್ಧಗಳಿಂದ ನಿಂದಿಸುತ್ತಾ ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ತರುವಂತ ಕೆಲಸವನ್ನು ನಿರಾತಂಕವಾಗಿ ಮಾಡುತ್ತಾ ಬರುತಿದ್ದಾರೆ. ಆದರೆ ನಮ್ಮ ರಾಜಕೀಯ ನೇತಾರರ ಜಾಣ ಕುರುಡು ಅವರನ್ನು ಇನ್ನಷ್ಟು ಅದೇ ಕೆಲಸಕ್ಕೆ ಪ್ರೇರೇಪಿಸುತಿದೆಯೇ ಹೊರತು ಅವುಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಮಾಡುತಿಲ್ಲ ಅದರ ಪರಿಣಾಮ 27-9-2017ರಂದು angel nayana Prajwal (ವಾಸ್ತವಕ್ಕೆ ಇದು ಒಂದು ಹೆಣ್ಣಿನ ಹೆಸರಾಗಿ ಕಂಡರೂ ಇದು ಫೇಕ್ ಅಕೌಂಟ್ ಎನ್ನುದರಲ್ಲಿ ಎರಡು ಮಾತಿಲ್ಲ) Santhosh uppar ಎಂಬವರ ಪೋಸ್ಟ್ ಒಂದನ್ನು ಶೇರ್ ಮಾಡಿ ಅದರಲ್ಲಿ ತುಳುನಾಡಿನ ಆರಾಧ್ಯ ಮೂರ್ತಿಯಾದ ಕೊರಗಜ್ಜನ ಬಗ್ಗೆ ಅಶ್ಲೀಲ-ಅವಾಚ್ಯ ಶಬ್ದಗಳಿಂದ ಕಾಮೆಂಟ್ ಹಾಕಿದ್ದು ಸಂಘಟಿತ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿರುತ್ತದೆ.
ಇವರ ಈ ಕೃತ್ಯವನ್ನು ವಿರೋಧಿಸಿ ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಸಹಾಯಕ ಪೋಲಿಸ್ ಆಯುಕ್ತರು ಮಂಗಳೂರು ಕೇಂದ್ರ ಉಪವಿಭಾಗ ಇವರಲ್ಲಿ ದೂರನ್ನು ದಾಖಲಿಸಿದೆ. ಅದಲ್ಲದೇ ಪೋಲಿಸ್ ಇಲಾಖೆ ಅತಿ ಶೀಘ್ರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಹೀನಾಯ ಕೃತ್ಯಕ್ಕೆ ಕೈ ಹಾಕಿರುವಂತ Santhosh uppar ಹಾಗೂ angel nayana Prajwal ಇವರುಗಳನ್ನು ಬಂದಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದೆ. ಒಂದು ವೇಳೆ ಸೂಕ್ತ ಕಾನೂನು ಕ್ರಮ ಜರುಗಿಸದೇ ಇದ್ದಲ್ಲಿ ತುಳುನಾಡಿನ ಸಂತ ಸಮುದಾಯದ ನೇತ್ರತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳನ್ನು ಒಟ್ಟಾಗಿಸಿ ಜನಾಂದೋಲಣದ ಮೂಲಕ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದೆ.
ಈ ಸಂದರ್ಭದಲ್ಲಿ ಹಿಂದೂ ಸಂರಕ್ಷಣಾ ಸಮಿತಿಯ ಗೌರವ ಸಲಹೆಗಾರರಾದ ಗಣೇಶ್ ಅತ್ತಾವರ, ಅದ್ಯಕ್ಷರಾದ ಕೆ.ಆರ್. ಶೆಟ್ಟಿ ಅಡ್ಯಾರ್ ಪದವು, ಉಪಾಧ್ಯಕ್ಷರಾದ ಶ್ರುತಿನ್ ಶೆಟ್ಟಿ ಕಡೇಶಿವಾಲಯ, ಪ್ರಧಾನ ಕಾರ್ಯದರ್ಶಿಗಳಾದ ಕಾರ್ತಿಕ್ ಶೆಟ್ಟಿ ಬರ್ಕೆ, ಸಂಘಟನಾ ಪ್ರಮುಖ್ ಗಣೇಶ್ ಕುಲಾಲ ಕೆದಿಲ, ಪ್ರಮೋದ್ ಕರ್ಕೇರ, ಕಾರ್ತಿಕ್ ಪಂಪ್’ವೆಲ್, ದೀಪಕ್ ಕುಲಾಲ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response